ಮೂಡುಕೋಡಿ ಹೊಸಮನೆ ಬಳಿ ಹಿಂದೂ ರುದ್ರಭೂಮಿಗೆ ಸ್ಥಳ ಸರ್ವೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ವೇಣೂರು ಗ್ರಾ.ಪಂ ವ್ಯಾಪ್ತಿಯ ಮೂಡುಕೋಡಿ ಗ್ರಾಮದ ಹೊಸಮನೆ ಪ.ಜಾತಿ ಕಾಲೊನಿ ಬಳಿ ಹಿಂದೂ ರುದ್ರಭೂಮಿ ನಿರ್ಮಾಣ ಮಾಡುವ ಅಗತ್ಯತೆ ಬಗ್ಗೆ ಲಭ್ಯವಿರುವ ಸರಕಾರಿ ಜಾಗವನ್ನು ಗುರುತಿಸಿ ವೇಣೂರು ಗ್ರಾ,ಪಂ. ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯ ಅನೂಪ್ ಜೆ ಪಾಯಸ್, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಧರ್ಮರಾಜ್ ಕೊಪ್ಪದ ಬಾಕಿಮಾರು, ಸ್ಥಳಿಯರ ನಿಯೋಗ ವೇಣೂರು ಗ್ರಾ.ಪಂಕ್ಕೆ ಗ್ರಾಮಸ್ಥರ ಸಹಿಯುಳ್ಳ ಲಿಖಿತ ಮನವಿ ಸಲ್ಲಿಸಿದ್ದರು.
ಗ್ರಾಪಂ ನಲ್ಲಿ ನಡೆದ ಸಾಮನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯಕೈಗೊಂಡು ಸ್ಥಳ ಗುರುತಿಸಿ ನೀಡುವಂತೆ ತಾಲೂಕು ತಹಶಿಲ್ದಾರರಿಗೆ ಕಡತವನ್ನು ರವಾನಿಸಿತ್ತು. ಈ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಶೀಘ್ರವಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ತಹಶಿಲ್ದಾರರ ಸೂಚನೆಯಂತೆ ಸರಕಾರಿ ಭೂಮಾಪನಾ ಇಲಾಖೆಯ ಅಧಿಕಾರಿ ಗಳು ಸರ್ವೆಕಾರ್ಯ ಕೈಗೊಂಡು ಸ್ಥಳ ನಿಗದಿಗೆ ಕ್ರಮ ಕೈಗೊಂಡಿದ್ದಾರೆ. ಸರ್ವೆ ವೇಳೆ ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಕರ್ ಡಿ., ಗ್ರಾಮ ಕರಣಿಕ ಸುದೇಶ್ ದೇವಯ್ಯ, ಗ್ರಾ.ಪಂ ಸದಸ್ಯರಾದ ರಾಜೇಶ್ ಪೂಜಾರಿ ಮೂಡುಕೋಡಿ, ಲಕ್ಷ್ಮಣ ಪೂಜಾರಿ, ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯ ಅನೂಪ್ ಜೆ ಪಾಯಸ್, ಬಿಜೆಪಿ ಗ್ರಾಮ ಸಮಿತಿಯ ಅಧ್ಯಕ್ಷ ಧರ್ಮರಾಜ್ ಕೊಪ್ಪದಬಾಕಿಮಾರು, ಭೂಮಾಪನಾ ಇಲಾಖೆಯ ಮೋಹನ್, ಸಹಾಯಕ ವೆಂಕಪ್ಪ, ಸಿ.ಎ ಬ್ಯಾಂಕ್ ಮಾಜಿ ಉಪಾಧ್ಯಕ್ಷ ರಾಜು, ಸ್ಥಳೀಯರಾದ ಕಾಮಿಲ, ಲಕ್ಷ್ಮಣ, ಕೆಮ್ಮರ, ಸುಧಾಕರ್ ಹೊಸಮನೆ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.