ಆರಂಬೋಡಿ ಮಹಿಳೆ ಸಂಶಯಾಸ್ಪದ ಸಾವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಮಹಿಳೆಯೊಬ್ಬರ ಶವ ನೇಣುಬಿಗಿದ ಸ್ಥಿತಿಯಲ್ಲಿ ಸಂಶಯಾಸ್ಪದವಾಗಿ ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಹೊಕ್ಕಾಡಿಗೋಳಿಯಲ್ಲಿ ಪತ್ತೆಯಾಗಿದೆ.
ಮೂಡುಬಿದಿರೆಯ ತೋಡಾರು ನಿವಾಸಿ ಇಬ್ರಾಹಿಂ ಅವರ ಪುತ್ರಿ, ಹೊಕ್ಕಾಡಿಗೋಳಿ ಅಶ್ರಫ್ ಅವರ ಪತ್ನಿ ರೆಹನಾ (21.ವ) ಸಂಶಯಾಸ್ಪದವಾಗಿ ಸಾವನ್ನಪ್ಪಿದವರು. ಮನೆಮಂದಿ ಮಲಗಿದ್ದ ವೇಳೆ ರೆಹನಾ ತನ್ನ ಕೊಠಡಿಯಲ್ಲಿ ಚೂಡಿದಾರ ವೇಲ್‌ನಿಂದ ಸ್ಲಾಬ್‌ನ ಹುಕ್ಸ್‌ಗೆ ನೇಣು ಬಿಗಿದು ಮೃತ ಪಟ್ಟಿದ್ದಾರೆ.

ರೆಹನಾ ಅವರನ್ನು 5 ವರ್ಷಗಳ ಹಿಂದೆ ಹೊಕ್ಕಾಡಿಗೋಳಿ ನಿವಾಸಿ ಆದಂ ಅವರ ಪುತ್ರ ಅಶ್ರಫ್ ಎಂಬವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಅಶ್ರಫ್ ಈಗ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಗಂಡ ಅಶ್ರಫ್ ಅವರ ಸಹೋದರನಿಗೆ ಮದುವೆ ಸಂಬಂಧ ಯಾವುದೋ ಕುಟುಂಬದೊಂದಿಗೆ ಮಾತುಕತೆ ನಡೆದಿದ್ದು, ಈ ಸಂಬಂಧವನ್ನು ರೆಹನಾ ತಪ್ಪಿಸಿರುತ್ತಾರೆ ಎಂದು ಮೈದುನ ಆರೋಪಿಸಿರುವ ಸಂದೇಶ ವಾಟ್ಸಪ್‌ನಲ್ಲಿ ರವಾಣೆಯಾಗಿದೆ. ಈ ವಿಚಾರದಲ್ಲಿ ಮನನೊಂದು ಅಥವಾ ಇನ್ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದ್ದು, ವೇಣೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.