ಶ್ರೀಮತಿ ಮೊಲಿ ವಿಲ್ಮಾ ಪಿಂಟೋ ಅವರಿಗೆ ಬೀಳ್ಕೊಡುಗೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅಂಡೆತಡ್ಕ ಇಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಪ್ರೌಢಶಾಲೆಗೆ ಪದೋನ್ನತಿ ಹೊಂದಿದ ಶ್ರೀಮತಿ ಮೋಲಿ ವಿಲ್ಮಾ ಪಿಂಟೊ ಇವರನ್ನು ಶಾಲಾ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಶಾಲೆಯಲ್ಲಿ ಏರ್ಪಡಿಸಿದ ಅಭಿನಂದನಾ ಸಭೆಯ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಶ್ರೀ ನಾರಾಯಣ ಗೌಡ ವಹಿಸಿದ್ದರು. ಉಪ್ಪಿನಂಗಡಿ ಸಹಸ್ರ ಕೋಚಿಂಗ್ ಸೆಂಟರ್ ನ ಪ್ರಾಂಶುಪಾಲರಾದ ಶ್ರೀ ಲೋಕೇಶ್ ಬೆತ್ತೋಡಿಯವರು ಅಭಿನಂದನಾ ನುಡಿಗಳನ್ನಾಡಿದರು. ಇಳಂತಿಲ ಕ್ಷೇತ್ರದ ತಾ. ಪಂ ಸದಸ್ಯರಾದ ಶ್ರೀ ಕೃಷ್ಣಯ್ಯ ಆಚಾರ್ಯ, ಇಳಂತಿಲ ಗ್ರಾ. ಪಂ ನ ನಿಕಟಪೂರ್ವ ಅಧ್ಯಕ್ಷರಾದ ಯು. ಕೆ ಇಸುಬು, ನಿವೃತ್ತ ಮುಖ್ಯೋಪಾಧ್ಯಾಯರಾದ ಸುಬ್ರಹ್ಮಣ್ಯ ರಾವ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರೀಮತಿ ಮೋಲಿ ವಿಲ್ಮಾ ಪಿಂಟೊ ತಮ್ಮ ಸೇವಾ ಬದುಕಿನ ಸವಿಕ್ಷಣಗಳನ್ನು ಹಂಚಿಕೊಂಡು ಶಾಲೆಗೆ ರೂ 10000 ಶಾಶ್ವತ ದತ್ತಿ ನಿಧಿ ನೀಡಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜನಾರ್ಧನ ಗೌಡ ಅಣ್ಣಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಅಣ್ಣಪ್ಪ ನಾಯ್ಕ ಎಂ ಸ್ವಾಗತಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ರಮೇಶ್ ಆಚಾರ್ಯ ವಂದಿಸಿದರೆ ಸಹಶಿಕ್ಷಕ ರಾಘು ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕರಾದ ಗುರುಪ್ರಸಾದ್, ನಯನಾ, ಮಂಗಳಾ, ಸುಪ್ರಿಯಾ ಸಹಕರಿಸಿದರು. ಹಿರಿಯ ವಿದ್ಯಾರ್ಥಿ ಸಂಘ,ಎಸ್.ಡಿ.ಎಂ.ಸಿ ಹಾಗೂ ಪೋಷಕರ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.