ಅ.19: ಮದ್ದಡ್ಕ ಧರ್ಮಶ್ರೀ ಸಂಕೀರ್ಣ ವಿಸ್ತೃತ ಕಟ್ಟಡ ಹಾಗೂ ಶ್ರೀ ದುರ್ಗಾ ಟ್ರೇಡರ್ಸ್ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮದ್ದಡ್ಕ: ಇಲ್ಲಿಯ ಧರ್ಮಶ್ರೀ ಸಂಕೀರ್ಣ ಇದರ ವಿಸ್ತೃತ ಕಟ್ಟಡ ಹಾಗೂ ಶ್ರೀ ದುರ್ಗಾ ಟ್ರೇಡರ್ಸ್ ಇದರ ಪ್ರಾರಂಭೋತ್ಸವ ಅ.19 ರಂದು ಮದ್ದಡ್ಕ ಧರ್ಮಶ್ರೀ ಸಂಕೀರ್ಣದಲ್ಲಿ ನಡೆಯಲಿದೆ.
ಉದ್ಘಾಟನೆ ಹಾಗೂ ಆಶೀರ್ವಚನವನ್ನು ಮೂಡಬಿದ್ರೆಯ ಕರಿಂಜೆ ಶ್ರೀ ವೀರಾಂಜನೇಯ ಕ್ಷೇತ್ರದ  ಶ್ರೀ ಮುಕ್ತಾನಂದ ಸ್ವಾಮೀಜಿಯವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಂತ್ಯಾರ್‌ ಸೇಕ್ರೆಟ್ ಹಾರ್ಟ್ ಚರ್ಚ್  ಧರ್ಮ ಗುರುಗಳಾದ ರೆ| ಫಾ| ಬೇಸಿಲ್ ವಾಸ್, ಮದ್ದಡ್ಕ ನೂರುಲ್ ಹುದಾ ಜಮುಅ ಮಸೀದಿಯ ಎಂ.ಎ ಮಹಮ್ಮದ್ ರಫೀಕ್ ಅಹ್ಸನಿ, ಸಂಸದ ನಳಿನ್ ಕುಮಾರ್ ಕಟೀಲ್, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ್ ಸಿಂಹ ನಾಯಕ್, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಮಾಜಿ ಶಾಸಕರಾದ ಕೆ.ವಸಂತ ಬಂಗೇರ,  ಕೆ.ಪ್ರಭಾಕರ ಬಂಗೇರ, ಬರೋಡ ತುಳು ಒಕ್ಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ,ಮಡಂತ್ಯಾರು ಸೇಕ್ರೆಡ್ ಹಾರ್ಡ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಲೆನ್ಸಿ ಪಿಂಟೊ ಉಪಸ್ಥಿತರಿರುವರು ಎಂದು ಕಟ್ಟಡ ಮಾಲಕ ಪ್ರಭಾಕರ ಶೆಟ್ಟಿ ಉಪ್ಪಡ್ಕ ತಿಳಿಸಿದ್ದಾರೆ.

ಈ ವಿಸ್ತೃತ ಕಟ್ಟಡದಲ್ಲಿ ನೂತನವಾಗಿ ಆರಂಭವಾಗಲಿರುವ ಶ್ರೀ ಮಂಜುನಾಥ ಬೇಕರಿ ಮತ್ತು ಲಕ್ಷ್ಮಿ ಜನರಲ್ ಫ್ಯಾನ್ಸಿ , ಸ್ಟೇಷನರಿ, ಫ್ಲವರ್ಸ್, ಶಾಂಭವಿ ಟೆಕ್ಸ್‌ಟೈಲ್ಸ್ ಉದ್ಘಾಟನೆಗೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.