ತಾಲೂಕು ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಅಭಯ ವೃಕ್ಷ ಕಾರ್ಯಕ್ರಮ

ಬೆಳ್ತಂಗಡಿ: ತಾಲೂಕು ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಅಭಯ ವೃಕ್ಷ ಕಾರ್ಯಕ್ರಮವು ತಣ್ಣೀರುಪಂತ ಶ್ರೀದೇವಿ ನಗರ ಶ್ರೀ ಮಹಮ್ಮಾಯಿ ದೇವಸ್ಥಾನದ ಮರಾಟಿ ಸಮಾಜ ಸಂಘದಲ್ಲಿ ಜರುಗಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ಲಿಂಗಪ್ಪ ನಾಯ್ಕ್ ಕಿನ್ನಿ ಕೊಡಂಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿ ಕಲ್ಲೇರಿ ಶ್ರೀ ಪದ್ಮ ಎಂಜಿನಿಯರಿಂಗ್ ವರ್ಕ್ಸ್ ಮಾಲಕ ವಿಠಲ ನಾಯ್ಕ್ ಉರುವಾಲು ಮಾತನಾಡಿ, ನಮ್ಮ ಲ್ಯಾಂಪ್ಸ್ ಸಹಕಾರ ಸಂಘವು ಆದಿವಾಸಿ ಸಮಾಜದ ಸದಸ್ಯರಿಗೆ ಹಾಗೂ ಸಮಾಜದ ಎಲ್ಲ ವರ್ಗದ ಜನರಿಗೆ ಸಹಕಾರಿಯಾಗುವ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು, ಅಭಯ ವೃಕ್ಷ ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದೆ. ದೇವಸ್ಥಾನ, ಮಂದಿರ, ಧಾರ್ಮಿಕ ಕ್ಷೇತ್ರಗಳನ್ನು ಗುರುತಿಸಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.
ಶ್ರೀ ಮಹಮ್ಮಾಯಿ ದೇವಿಯ ಪವಿತ್ರ ಕ್ಷೇತ್ರದಲ್ಲಿ ಒಂಬತ್ತು ಬಗೆಯ ಗಿಡಗಳನ್ನು ನೆಡುವುದರ ಮೂಲಕ ನವಗ್ರಹಗಳ ನಿರ್ಮಾಣ ಮಾಡಲಾಗಿದೆ. ಪವಿತ್ರ ಕ್ಷೇತ್ರದಲ್ಲಿ ಅಗತ್ಯವಿರುವ ಗಿಡಗಳನ್ನು ನೆಡುವ ಮೂಲಕ ಜನರಲ್ಲಿ ಭಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಗಿಡಗಳಲ್ಲಿರುವ ದೈವಿಕ ಶಕ್ತಿಯ ಬಗ್ಗೆ ಅರಿವನ್ನು ಮೂಡಿಸುವುದೆ ಅಭಯ ವೃಕ್ಷ ಯೋಜನೆಯ ಮುಖ್ಯ ಉದ್ದೇಶ ಎಂದರು.
ಲ್ಯಾಂಪ್ಸ್ ಸಹಕಾರಿ ಸಂಘದ ನಿರ್ದೇಶಕ ತಿಮ್ಮಪ್ಪ ನಾಯ್ಕ್, ಪ್ರಶಾಂತ್ ನಾಯ್ಕ್, ದೇವಸ್ಥಾನದ ಅಧ್ಯಕ್ಷ ಸುಂದರ ನಾಯ್ಕ್, ಗೋಪಾಲಕೃಷ್ಣ ನಾಯ್ಕ್ ಹಾಗೂ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ವರ್ಷಿತ, ಪ್ರತೀಕ್ಷಾ, ಯಶ್ವಿತ ಪ್ರಾರ್ಥಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀನಾ ಕುಮಾರ್ ಸ್ವಾಗತಿಸಿ, ಜಯರಾಮ ನಾಯ್ಕ ಹಲ್ಲೇಜಿ ಕಾರ್ಯಕ್ರಮ ನಿರೂಪಿಸಿ, ಭಜನಾ ಮಂಡಳಿ ಅಧ್ಯಕ್ಷ ಸುಂದರ ನಾಯ್ಕ ಕಿನ್ನಿ ಕೊಡಂಗೆ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.