ಕೆಎಸ್‌ಎಮ್‌ಸಿಎ ನೂತನ ನಿರ್ದೇಶಕರಾಗಿ ರೆ.ಫಾ| ಶಾಜಿ ಮ್ಯಾಥ್ಯೂ ನೇಮಕ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ಕ್ರೈಸ್ತ ಧರ್ಮಪ್ರಾಂತ್ಯ ಕರ್ನಾಟಕ ಸಿರೋಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ (ಕೆಎಸ್‌ಎಮ್‌ಸಿಎ) ನೂತನ ನಿರ್ದೇಶಕರಾಗಿ ವಂ.ಫಾ| ಶಾಜಿ ಮಾಥ್ಯೂ ಅಧಿಕಾರ ಸ್ವೀಕರಿಸಿದ್ದಾರೆ.
ಪ್ರಸ್ತುತ ಬೆಳ್ತಂಗಡಿ ಧರ್ಮ ಕೇಂದ್ರದ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಶ್ರೀ ಸಾಮಾನ್ಯರ ಸಂಘಟನೆ ಯಾದ ಸಿರೋಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್ ಇದರ ನಿರ್ದೇಶಕರಾಗಿ ಧರ್ಮಧ್ಯಕ್ಷ ಲಾರೆನ್ಸ್ ಮುಕ್ಕುಯಿ ಅವರು ಸೆ.೧ರಿಂದ ಜಾರಿಯಾಗುವಂತೆ ಈ ನೇಮಕ ಮಾಡಿದ್ದಾರೆ.
ಸ್ಥಾಪಕ ನಿರ್ದೇಶಕರಾಗಿ ವಂ. ಬಿನೋಯ್ ಜೋಸೆಫ್ ಹಾಗೂ ಕೆಲದಿನಗಳ ಕಾಲ ವಂ.ಕುರಿಯಾಕೋಸ್ ಇವರು ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ವಂ. ಶಾಜಿ ಮಾಥ್ಯೂ ಅವರು ಧರ್ಮಕೇಂದ್ರದ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ಹಾಗೂ ಸಮಾಜ ಸಂಘಟನೆಯಾದ ಕರ್ನಾಟಕ ಸಿರೋಮಲಬಾರ್ ಕಥೋಲಿಕ್ ಅಸ್ಸೋಸಿಯೇಷನ್ ಇದರ ನಿರ್ದೇಶಕರಾಗಿ ಸೇವೆಯಲ್ಲಿದ್ದು, ಬಂಗಾಡಿ ಮರಿಯಾಂಬಿಕ ಚರ್ಚಿನ ಧರ್ಮಗುರುಗಳಾಗಿ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾಗಿ, ಸಂಚಾಲಕರಾಗಿ, ಗಂಡಿಬಾಗಿಲು ಸಂತ ತಾಮಸರ ಚರ್ಚಿನ ಧರ್ಮಗುರುಗಳಾಗಿ, ಶಾಲೆಯ ಸಂಚಾಲಕರಾಗಿ, ಬೆಳ್ತಂಗಡಿ ಧರ್ಮಪ್ರಾಂತ್ಯ ಯುವಜನ ಒಕ್ಕೂಟದ ನಿರ್ದೇಶಕರಾಗಿ, ಮಂಗಳೂರು, ನಾವೂರು, ನೆಲ್ಯಾಡಿ, ಆರಳ ಚರ್ಚುಗಳಲ್ಲೂ ಸೇವೆ ಸಲ್ಲಿಸಿರುತ್ತಾರೆ.
ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ, ಪ್ರಸ್ತುತ ಬೈಂದೂರು ತಾಲೂಕಿನ ಜಡ್ಕಲ್ ಗ್ರಾಮದವರಾಗಿದ್ದು 2006 ಜನವರಿಯಲ್ಲಿ ಗುರುದೀಕ್ಷೆಯನ್ನು ಪಡೆದಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.