ಎಸ್‌ಬಿಐ ವಿಮಾ ಕಂಪನಿಯ ಪಾಲಿಸಿದಾರರ ಸೇವಾ ಸಂಸ್ಥೆ ಸ್ಥಳಾಂತರಗೊಂಡು ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ಡೋಂಗ್ರೆ ಬ್ಯುಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕ್ ವಿಮಾ ಕಂಪನಿಯ ಪಾಲಿಸಿದಾರರ ಸೇವಾ ಸಂಸ್ಥೆಯು ಅ.೯ ರಂದು ಬೆಳ್ತಂಗಡಿ ಬಸ್ಸುತಂಗುದಾಣದ ಬಳಿ ಇರುವ ಪರಿಕ್ರಮ ರೆಸಿಡೆನ್ಸಿಯ ೨ನೇ ಮಹಡಿಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.
ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಕಾರ್ಕಳ ಶಾಖೆಯ ಶಾಖಾ ಪ್ರಬಂಧಕ ಪ್ರಕಾಶ್ ಆಚಾರ್ಯ ನೂತನ ಶಾಖೆಯನ್ನು ಉದ್ಘಾಟಿಸಿದರು. ಬೆಳ್ತಂಗಡಿ ಹೊಲಿ ರಿಡೀಮರ್ ಚರ್ಚ್‌ನ ಧರ್ಮಗುರುಗಳಾದ ಅತೀ ವಂದನೀಯ ಜೋಸೆಫ್ ಆಲ್ಪೋನ್ಸ್ ಕಾರ್ಡೋಜಾ ಅವರು ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಪರಿಕ್ರಮ ರೆಸಿಡೆನ್ಸಿಯ ಮಾಲಕ ಪೃಥ್ವಿರಂಜನ್ ರಾವ್, ನಿವೃತ್ತ ಪ್ರಬಂಧಕ ಶೇಖರ್ ಬಂಗೇರ, ನ್ಯಾಯವಾದಿ ಕೇಶವ ಬೆಳಾಲು, ನೋಟರಿ ನ್ಯಾಯವಾದಿ ಶ್ರೀನಿವಾಸ್ ಗೌಡ, ಬೆಳ್ತಂಗಡಿ ಸೀನಿಯರ್ ಏಜೆನ್ಸಿ ಮೆನೇಜರ್ ಗಿಲ್ಬರ್ಟ್ ಪಿಂಟೊ, ಸಲಹೆಗಾರರಾದ ಮಂಜುನಾಥ್ ಗುಡಿಗಾರ್, ಸುಭಾಷ್ ಚಂದ್ರ ಎಂ.ಪಿ, ನರೇಂದ್ರ ತುಳುಪುಳೆ, ರಘುರಾಮ ನಾಯ್ಕ, ಸ್ಟೇನಿ ಲೋಬೊ, ವಸಂತ ಗೌಡ, ಬಿ.ಆಕಾಶ್, ವಿಠಲದಾಸ ಪೈ, ಗ್ರಾಹಕರು,ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.