ಮುಂಡಾಜೆ: ಅಪಘಾತ ಸ್ಥಳದಲ್ಲಿ ಸರ್ಕಲ್ ನಿರ್ಮಾಣಕ್ಕೆ ಮುಂದಾದ ಊರವರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ: ಮಂಗಳೂರು- ಚಿಕ್ಕಮಗಳೂರು ರಾಜ್ಯ ಹೆದ್ದಾರಿಯ ಮುಂಡಾಜೆಯ ಭಿಡೆ ಕ್ರಾಸ್ ಎಂಬಲ್ಲಿ ಕಲ್ಮಂಜ ಮೂಲಕ ಧರ್ಮಸ್ಥಳ ಸಂಪರ್ಕಿಸುವ ಸಮೀಪದ ರಸ್ತೆ ಇದೆ. ಈ ರಸ್ತೆಯಲ್ಲಿ ಅನೇಕ ವಾಹನಗಳು ಸಾಗುತ್ತಿದ್ದು ಭಿಡೆಕ್ರಾಸ್ ಬಳಿ ಪ್ರತಿದಿನ ಹಲವಾರು ಅಪಘಾತಗಳು ಸಂಭವಿಸುತ್ತಿವೆ.
ಮುಖ್ಯರಸ್ತೆಯಿಂದ ಕಲ್ಮಂಜ ರಸ್ತೆಗೆ ಹಾಗೂ ಕಲ್ಮಂಜದಿಂದ ಮುಖ್ಯರಸ್ತೆಗೆ ವಾಹನಗಳನ್ನು ಚಲಾಯಿಸುವಾಗ ಹೆಚ್ಚಿನ ಚಾಲಕರು ರಾಂಗ್‌ಸೈಡ್‌ನಿಂದ ನುಗ್ಗುವ ಕಾರಣ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ ಇಲ್ಲಿರುವ ಬಸ್ಸು ತಂಗುದಾಣ ಮುಖ್ಯರಸ್ತೆ ಕಾಣದಂತೆ ಅಡ್ಡಲಾಗಿದೆ. ವಾಹನ ಸವಾರರು ಬೇಕಾಬಿಟ್ಟಿಯಾಗಿ ವಾಹನಗಳನ್ನು ನುಗ್ಗಿಸುವ ಕಾರಣದಿಂದ ಇಲ್ಲಿ ಅಪಘಾತಗಳು ಸಂಭವಿಸುತ್ತಿರುವುದರಿಂದ ಬೇಸತ್ತ ಊರವರು ಮುಂಡಾಜೆ ಗ್ರಾಮ ಪಂಚಾಯಿತಿಗೆ ಮನವಿಯನ್ನು ನೀಡಿ, ೪ಅಡಿ ಎತ್ತರ ಹಾಗೂ ೨ಅಡಿ ಸುತ್ತಳತೆಯ ಸರ್ಕಲ್ ನಿರ್ಮಿಸುವ ಕೆಲಸಕ್ಕೆ ಅ.೮ರಂದು ಚಾಲನೆ ನೀಡಿದರು.


ಸ್ಥಳೀಯ ಮುಖಂಡರಾದ ಅರೆಕ್ಕಲ್ ರಾಮಚಂದ್ರ ಭಟ್, ಸುಜಿತ್ ಭಿಡೆ, ರಾಮಚಂದ್ರ ಸಹಸ್ರಬುದ್ಧೆ, ಗಣೇಶ ಬಂಗೇರ, ರಮೇಶ್ ನಾಯ್ಕ, ಅಶೋಕ ಮೆಹೆಂದಳೆ, ಗಣೇಶ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.