ರೂ. 5 ಕೋಟಿ ವೆಚ್ಚದಲ್ಲಿ ಮಾಲಾಡಿ- ಗರ್ಡಾಡಿ ರಸ್ತೆಗೆ ಶಿಲಾನ್ಯಾಸ

ಮಾಲಾಡಿ: ಇಲ್ಲಿಯ ಬಹುದಿನದ ಬೇಡಿಕೆಯಾಗಿರುವ ಮಾಲಾಡಿ, ಸೋಣಂದೂರು, ಗರ್ಡಾಡಿ ರಸ್ತೆಯು ತೀವ್ರ ಹದಕೆಟ್ಟಿದ್ದು ರಸ್ತೆಗೆ ಸುಮಾರು ರೂ.೫ಕೋಟಿ ವೆಚ್ಚದಲ್ಲಿ ಶಾಸಕ ಹರೀಶ್ ಪೂಂಜ ಅ.4ರಂದು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭ ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ಮಾಲಾಡಿ ತಾ.ಪಂ. ಸದಸ್ಯ ಜೋಯೆಲ್ ಮೆಂಡೋನ್ಸಾ, ಪಡಂಗಡಿ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಶಂಕರ ಶೆಟ್ಟಿ, ಬೆಳ್ತಂಗಡಿ ಪಿಡಬ್ಲ್ಯೂಡಿ ಇಂಜಿನಿಯರ್ ಶಿವಪ್ರಸಾದ್ ಅಜಿಲ, ಗುತ್ತಿಗೆದಾರ ರಾಜಾಪ್ರಕಾಶ್ ಶೆಟ್ಟಿ, ವಿಜಯ ಸಾಲ್ಯಾನ್ ಪಣಕಜೆ, ಪುರುಷೋತ್ತಮ ಶೆಟ್ಟಿ, ರಾಜೇಶ್ ಆಚಾರ್ಯ, ಯೋಗೀಶ್ ಭಟ್, ಉದಯ ಭಂಡಾರಿ, ಸುಧಾಕರ ಪೂಜಾರಿ, ಹಾಮದ್ ಬಾವ, ಪಡಂಗಡಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ಗ್ರಾ.ಪಂ. ಮಾಜಿ ಸದಸ್ಯರು, ಸಿ.ಎ.ಬ್ಯಾಂಕ್ ನಿರ್ದೇಶಕರು, ಶಕ್ತಿಕೇಂದ್ರದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.