ಮೂಡುಕೋಡಿಯ ಬೆದ್ರಡ್ಡ ಸಾರ್ವಜನಿಕ ಶೌಚಾಲಯ ಉದ್ಘಾಟನೆ

ಮೂಡುಕೋಡಿ: ವೇಣೂರು ಗ್ರಾ.ಪಂ. ವ್ಯಾಪ್ತಿಯ ಮೂಡುಕೋಡಿ ಗ್ರಾಮದ ಬೆದ್ರಡ್ಡ ಎಂಬಲ್ಲಿ ಗ್ರಾ.ಪಂ.ಸದಸ್ಯೆ ಜೆಸ್ಸಿ ಟೀಚರ್ ಅವರ ವಿವೇಚನಾ ಅನುದಾನದಲ್ಲಿ ನಿರ್ಮಾಣಗೊಂಡ ಸಾರ್ವಜನಿಕ ಶೌಚಾಲಯವನ್ನು ಅ.6 ರಂದು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ರೋಗ ರುಜಿನಗಳು ಹರಡುವ ಈ ಸಮಯದಲ್ಲಿ ಜನರು ಸ್ವಚ್ಛತೆ ಕಡೆ ಗಮನ ನೀಡುವುದು ಅತೀ ಅಗತ್ಯವಿದೆ ಎಂದರು.


. ವೇಣೂರು ಗ್ರಾ.ಪಂ ಅಧ್ಯಕ್ಷೆ ಶೋಭಾ ಹೆಗ್ಡೆ, ಉಪಾಧ್ಯಕ್ಷ ಅರುಣ್ ಕ್ರಾಸ್ತ, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಗ್ರಾ.ಪಂ. ಸದಸ್ಯರಾದ ರಾಜೇಶ್ ಪೂಜಾರಿ ಮೂಡುಕೋಡಿ, ಹರೀಶ್ ಪಿ.ಎಸ್, ಲಕ್ಷ್ಮಣ ಪೂಜಾರಿ, ಲೋಕಯ್ಯ ಪೂಜಾರಿ, ನೇಮಯ್ಯ ಕುಲಾಲ್, ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯ ಅನೂಪ್ ಜೆ ಪಾಯಸ್, ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಉಮೇಶ್ ನಡ್ತಿಕಲ್ಲು, ಪುತ್ತೂರು ಗೋರಕ್ಷಾ ಪ್ರಮುಖ ರಾಮ್ ಪ್ರಸಾದ್, ವೇಣೂರು ಸಿ.ಎ ಬ್ಯಾಂಕ್ ಅಧ್ಯಕ್ಷ ಸುಂದರ ಹೆಗ್ಡೆ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಅಂಡಿಂಜೆ, ಕಾರ್ಯದರ್ಶಿ ನಿತೀಶ್ ಗುಂಡೂರಿ, ಸ್ಥಳೀಯರಾದ ಪ್ರಶಾಂತ್ ಗೌಡ, ರಮೇಶ್ ಪೂಜಾರಿ, ಪ್ರಕಾಶ್ ಹೆಗ್ಡೆ, ಸದಾನಂದ, ಗಜೇಂದ, ಆನಂದ ಪಾದೆಮನೆ, ಅಣ್ಣು ಮೂಡುಕೋಡಿ, ಅಶೋಕ್ ಹೆಗ್ಡೆ, ರಾಮು ಕಳಸೊಟ್ಟು ಬೆದ್ರಡ್ಕ ಉಪಸ್ಥಿತರಿದ್ದರು.
ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಧರ್ಮರಾಜ್ ಕೊಪ್ಪದ ಬಾಕಿಮಾರು ಸ್ವಾಗತಿಸಿ, ಕಾರ್ಯದರ್ಶಿ ನಿಖಿಲ್ ಡಿ ಶೆಟ್ಟಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.