ನಾವೂರು ದೇವಸ್ಥಾನದಲ್ಲಿ ಗೂಗುಲ್ ಮೀಟ್ ಮೂಲಕ ವಿಷ್ಣು ಸಹಸ್ರ ನಾಮ ಪಾಠ ಪಠಣ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ನ ಆಶ್ರಯದಲ್ಲಿ *“ಗೂಗಲ್ ಮೀಟ್ ಮಾದ್ಯಮದ ಮೂಲಕ ವಿಷ್ಣು ಸಹಸ್ರನಾಮ~ ಪಾಠ-ಪಠಣ*” ಮೊದಲ ಪ್ರಯೋಗವನ್ನು ದೇವಸ್ಥಾನದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಎ. ಬಿ. ಉಮೇಶ್ ರವರು ಅ.4 ರಂದು ಬೆಳಿಗ್ಗೆ 5.15ಕ್ಕೆ ಸಾಂಕೇತಿಕವಾಗಿ ಉದ್ಘಾಟಿಸಿದರು.

 

ವಿಷ್ಣು ಸಹಸ್ರ ನಾಮ ಪಾಠ-ಪಠಣವನ್ನು ದೇವಸ್ಥಾನದ ಮಾರ್ಗದರ್ಶಕರು ಧಾರ್ಮಿಕ ಮುಖಂಡರಾದ ಡಾ. ಪ್ರದೀಪ್ ಆಟಿಕುಕ್ಕೆ ರವರು ನೆರವೇರಿಸಿದರು. ಗೂಗಲ್ ಮೀಟ್ ನಲ್ಲಿ ಶ್ರೀ ಧ. ಮ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯವರಾದ *ಡಾ. ಬಿ. ಯಶೋವರ್ಮ* ರವರು ಬೆನಕ ಆಸ್ಪತ್ರೆಯ ವೈದ್ಯರಾದ ಡಾ. ಗೋಪಾಲಕೃಷ್ಣ ಭಟ್ ಹಾಗೂ ಇನ್ನಿತರ ಗಣ್ಯರು ಪಠಣದಲ್ಲಿ ಸಂಪೂರ್ಣವಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ  ಹರೀಶ್ ಕಾರಿಂಜ, ಕಾರ್ಯದರ್ಶಿ ಗಣೇಶ್ ಗೌಡ ಸೆಲ್ಲಿಪಲ್ಕೆ, ಟ್ರಸ್ಟಿ ಧರ್ಣಪ್ಪ ಮೂಲ್ಯ ಮತ್ತು ಡಾ. ಕವಿತಾ ಪ್ರದೀಪ್, ಹರಿಕಿರಣ್ ಪ್ರಭು, ದೇವಸ್ಥಾನದ ಅರ್ಚಕರಾದ  ಅಶ್ವಿನ್ ಭಟ್, ಸಹಾಯಕರಾದ ಮಂಜಪ್ಪ ಪೂಜಾರಿ ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 5.00 ಗಂಟೆಗೆ ಪಠಣ ನಡೆಯಲಿರುವುದರಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಮಕ್ಕಳು ಇದರ ಪ್ರಯೋಜನ ಪಡೆಯಬೇಕಾಗಿ  ಶ್ರೀ ಗೋಪಾಲಕೃಷ್ಣ ಸೇವಾ ಟ್ರಸ್ಟ್ ನ ಅಧ್ಯಕ್ಷರು ವಿನಂತಿ ಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.