ಅಂಡಿಂಜೆ ವಿವಿಧ ಕಾಮಗಾರಿಗಳಿಗೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

ಅಂಡಿಂಜೆ : ಇಲ್ಲಿಯ ಜನರ ಬಹು ದಿನದ ಬೇಡಿಕೆಯಾಗಿರುವ ಅಂಡಿಂಜೆ – ನೆಲ್ಲಿಂಗೇರಿ 1.25ಕೋಟಿ ವೆಚ್ಚದ ರಸ್ತೆ ಕಾಂಕ್ರಿಟೀಕರಣ, 3 ಲಕ್ಷ ವೆಚ್ಚದ  ಹೈಮಾಸ್ಟ್ ದೀಪ, 5 ಲಕ್ಷ ವೆಚ್ಚದ ಆಟೋ ಸ್ಟಾಂಡ್ ನಿರ್ಮಾಣ ಕಾಮಗಾರಿಗೆ ಶಾಸಕ ಹರೀಶ್ ಪೂಂಜ ಅ. 6 ರಂದು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಅಂಡಿಜೆ ಗ್ರಾ.ಪಂ ಮಾಜಿ ಅಧ್ಯಕ್ಷ  ಮೋಹನ್ ಅಂಡಿಂಜೆ, ಮಾಜಿ ಅಧ್ಯಕ್ಷ ರಾಘವ ಪುತ್ರನ್, ವೇಣೂರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭ ಹೆಗ್ಡೆ, ಉಪಾಧ್ಯಕ್ಷ ಅರುಣ್ ಕ್ರಾಸ್ತ, ಅಂಡಿಂಜೆ ಪಂಚಾಯತ್ ಕಾರ್ಯದರ್ಶಿ ನಿರ್ಮಲ್ ಕುಮಾರ್, ಪಂಚಾಯತ್ ಸಿಬ್ಬಂದಿ, ಪಂಚಾಯತ್  ಮಾಜಿ ಸದಸ್ಯರು, ನಾರಾವಿ ಮತ್ತು ವೇಣೂರ್ ಸೊಸೈಟಿ ಸದಸ್ಯರು, ಆಟೋ ಚಾಲಕ ಮಾಲಕರು, ಜನ ಪ್ರತಿನಿಧಿಗಳು, ಊರವರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.