ಡಿ.ಎಸ್.ಎಸ್.ನಿಂದ ಮೊಂಬತ್ತಿ ಬೆಳಗಿಸಿ ಪ್ರತಿಭಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಬೆಳ್ತಂಗಡಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‍ವಾದ) ತಾಲೂಕು ಶಾಖೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ಉತ್ತರಪ್ರದೇಶದ ಹತ್ರಾಸ್‍ನಲ್ಲಿ ಇತ್ತಿಚೇಗೆ ಅಮಾಯಕಿ ಮನೀಷಾ ವಾಲ್ಮೀಕಿ ಎಂಬ ದಲಿತ ಯುವತಿಯನ್ನು ನಾಲ್ವರು ಕಾಮಾಂಧರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿ, ಕೊಲೆಗೈದಿರುವುದನ್ನು ಖಂಡಿಸಿ ಮೊಂಬತ್ತಿ ಬೆಳಗಿಸಿ ಪ್ರತಿಭಟನಾ ಸಭೆ ಅ.5ರಂದು ಸಂಜೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಜರುಗಿತು.

ಸಭೆಯನ್ನು ಉದ್ದೇಶಿಸಿ, ದಲಿತ ಮುಖಂಡರುಗಳಾದ ಚಂದು ಎಲ್, ನೇಮಿರಾಜ ಕಿಲ್ಲೂರು, ಸಿಪಿಐ(ಎಂ) ಮುಖಂಡ ನ್ಯಾಯವಾದಿ ಶಿವಕುಮಾರ್ , ದಮ್ಮಾನಂದ, ವೆಂಕಣ್ಣ ಕೊಯ್ಯೂರು ಅವರು ಮಾತನಾಡಿ ದಲಿತ ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರಕಾರವನ್ನು ವಜಾ ಗೊಳಿಸಬೇಕು, ದೇಶದ ಎಲ್ಲಾ ದಲಿತ ಸಮುದಾಯದ ಕುಟುಂಬಗಳಿಗೆ ಕೇಂದ್ರ ಸರಕಾರ ರಕ್ಷಣೆ ನೀಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಾಯಕರುಗಳಾದ ಶೇಖರ ಕುಕ್ಕೇಡಿ, ಬಿ.ಕೆ ವಸಂತ, ನಾಗರಾಜ್ ಲಾಯಿಲ,
ಪ್ರಭಾಕರ್, ಶ್ರೀ ಧರ್ ಕಳೆಂಜ, ಶೇಖರ್ ಲಾಯಿಲ, ಬೇಬಿ ಸುವಣ೯, ಶ್ರೀಮತಿ ನೀಲಮ್ಮ, ಅಜಯ್, ಹರಿದಾಸ್ ಮೊದಲಾದ ವರು ಉಪಸ್ಥಿತಿ ಇದ್ದರು.

 


ಪ್ರತಿಭಟನಾ ಮೆರವಣಿಗೆ: ನಂತರ ಉತ್ತರ ಪ್ರದೇಶ ಸರಕಾರವನ್ನು  ವಜಾ ಗೊಳಿಸುವಂತೆ ಒತ್ತಾಯಿಸಿ ಬೆಳ್ತಂಗಡಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಮಿನಿ ವಿಧಾನ ಸೌಧ ದಲ್ಲಿ ತಹಶೀಲ್ದಾರ್ ಮೂಲಕ , ರಾಷ್ಟ್ರ ಪತಿಗಳಿಗೆ ಮನವಿ ಸಲ್ಲಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.