ದೈಕಿನಕಟ್ಟೆ ಪೆಟ್ರೋಲ್ ಬಂಕ್ ಚೋರರು ಪೊಲೀಸ್ ಬಲೆಗೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬಂಟ್ವಾಳ :ದೈಕಿನ ಕಟ್ಟೆ ಪೆಟ್ರೋಲ್ ಬಂಕ್ ನಲ್ಲಿ ಕಳ್ಳತನ ನಡೆಸಿದ ಮೂವರು ಚೋರರನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕು ಪುಂಜಾಲಕಟ್ಟೆ ಹೆದ್ದಾರಿಯ ದೈಕಿನಕಟ್ಟೆಯಲ್ಲಿ ನಡೆದ ಪೆಟ್ರೋಲ್ ಪಂಪ್ ಕಳ್ಳತನಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಸೆಪ್ಟೆಂಬರ್ 4ರಂದು ಧರ್ಮಶ್ರೀ ಪೆಟ್ರೋಲ್ ಬಂಕಿಗೆ ಕಳ್ಳರ ತಂಡ ನುಗ್ಗಿ ಸುಮಾರು 70 ಸಾವಿರ ರೂಪಾಯಿ ನಗದು ದೋಚಿದ್ರು. ಪುಂಜಾಲಕಟ್ಟೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಘಟನಾ ಸ್ಥಳದಿಂದ ಕೆಲ ಮಾಹಿತಿಗಳನ್ನು ಪಡೆದಿದ್ದರು. ಆರೋಪಿಗಳ ಜಾಡು ಹಿಡಿದು, ಸಿಸಿಟಿವಿ ಮತ್ತಿತರ ಸಾಕ್ಷಗಳನ್ನು ಪಡೆದುಕೊಂಡು ತನಿಖೆ ಮುಂದುವರಿಸಿದ್ರು.ಸದ್ಯ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಕಂಕನಾಡಿ ಪೊಲೀಸ್ ಬಂಧಿಸಿ ತನಿಖೆ‌ಮುಂದುವರಿಸಿದ್ದಾರೆ.

ಕಂಕನಾಡಿ ಠಾಣಾ ಸರಹದ್ದಿನಲ್ಲಿ ಸೆಪ್ಟಂಬರ್ 21ರಂದು ದಾಮೋದರ ಸುವರ್ಣ ಪೆಟ್ರೋಲ್ ಬುಕ್ ನಲ್ಲಿ ಕಳ್ಳತನವಾಗಿತ್ತು. ಈ ಪ್ರಕಣಕ್ಕೆ ಸಂಬಂಧ ಪಟ್ಟಂತೆ ತನಿಖೆ‌ ವೇಳೆ ಈ ಮೂರು ಆರೋಪಿಗಳು ದೈಕಿನಕಟ್ಟೆಯಲ್ಲಿ‌ಕ ಕೃತ್ಯ ಎಸಗಿದಾಗಿ ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ.ಪೊಲೀಸರು ಮೂವರನ್ನು ದಸ್ತಗಿರಿ ಮಾಡಿ,ಕೃತ್ಯಕ್ಕೆ ಬಳಸಿದ್ದ ಮಾರಕಗಳು ಹೆಲ್ಮೆಟ್ ಬೈಕನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಂದ ನಗದನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.ಮಹಮ್ಮದ್ ಸುಹೇಲ್, ಆಶಿಕ್ ಅಹ್ಮದ್, ಮಹಮ್ಮದ್ ಆರ್ಫನ್ ಎಂದು ಗುರುತಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.