ಪಂಚಾಯತ್‌ರಾಜ್ ಕಾಯ್ದೆ ತಿದ್ದುಪಡಿ ಅಂಗೀಕಾರ: ಸದಸ್ಯರ ಕ್ಷೇತ್ರ ಮೀಸಲು ಅವಧಿ 5 ವರ್ಷಕ್ಕೆ ಇಳಿಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಸದಸ್ಯರ ಮೀಸಲು ಅವಧಿಯನ್ನು 10 ವರ್ಷಗಳಿಂದ 5 ವರ್ಷಕ್ಕೆ ಇಳಿಸುವ ಹಾಗೂ ಅಧ್ಯಕ್ಷ ಉಪಾಧ್ಯಕ್ಷರ ಅಧಿಕಾರ ಅವಧಿಯನ್ನು ಎರಡೂವರೆ ವರ್ಷಕ್ಕೆ ಇಳಿಸುವ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.
ಹಿಂದೆ ಗ್ರಾಮ ಪಂಚಾಯತ್‌ಗಳ ವಾರ್ಡ್ ಮೀಸಲಾತಿ ಅವಧಿ 5 ವರ್ಷ ಇದ್ದುದನ್ನು10 ವರ್ಷಕ್ಕೆ ಹಾಗೂ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಅವಧಿಯನ್ನು ಎರಡೂವರೆ ವರ್ಷದಿಂದ 5 ವರ್ಷಕ್ಕೆ ಏರಿಸಿ ಹಿಂದಿನ ಸರಕಾರ ತಿದ್ದುಪಡಿ ಮಾಡಿತ್ತು. ಅದನ್ನು ಈಗ 5 ವರ್ಷ ಮತ್ತು ಎರಡೂವರೆ ವರ್ಷಕ್ಕೆ ಸೀಮಿತಗೊಳಿಸಿ ತಿದ್ದುಪಡಿ ಮಸೂದೆಯನ್ನು ಸರಕಾರ ಜಾರಿಗೆ ತಂದಿದೆ. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಕ್ಷೇತ್ರಗಳ ಮೀಸಲಾತಿ ಅವಧಿಯನ್ನು ಹತ್ತು ವರ್ಷಗಳಿಂದ ಐದು ವರ್ಷಕ್ಕೆ ಬದಲಾಯಿಸುವ ತಿದ್ದುಪಡಿಯ ಅಗತ್ಯದ ಬಗ್ಗೆ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಪ್ರಸ್ತಾಪಿಸಿದರು. ರಮೇಶ್ ಕುಮಾರ್ ಅವರು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದನ್ನು ತಪ್ಪಿಸಲು ಕನಿಷ್ಠ 30 ತಿಂಗಳು ಯಾವುದೇ ಅವಿಶ್ವಾಸ ಮಂಡನೆಗೆ ಅವಕಾಶ ಇರಬಾರದು. ಪಂಚಾಯತ್‌ಗಳ ಚುನಾವಣೆಯನ್ನು ಆಯೊಗವೇ ನಡೆಸಿ ಎಲ್ಲ ವೆಚ್ಚವನ್ನೂ ಆಯೋಗವೇ ಭರಿಸುವಂತಾಬೇಕು, ಮತದಾನಕ್ಕೆ 2 ದಿನ ಮುನ್ನ ಮದ್ಯ ಮಾರಾಟ ನಿಷೇಧ ಮಾಡಬೇಕೆಂದು ಪ್ರಸ್ತಾಪಿಸಲಾಗಿತ್ತು ಎಂದರು.
ಈಗಾಗಲೇ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೊಳಿಸಲಾಗಿದ್ದು, ಅದಕ್ಕೆ ಸದನದ ಒಪ್ಪಿಗೆ ಪಡೆದು ಕಾನೂನು ರೂಪ ನೀಡಲು ಅನುಮತಿ ಪಡೆಯಲಾಯಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.