ಸುವ್ಯವಸ್ಥಿತ ರಸ್ತೆ‌ ಸಂಪರ್ಕದಿಂದ ವಂಚಿತರಾದ ಕಲ್ಮಂಜ ಗ್ರಾಮಸ್ಥರು, ರಸ್ತೆಯಲ್ಲಿ ಬಾಳೆಗಿಡ ನೆಟ್ಟು ವಿನೂತನ ಪ್ರತಿಭಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಅಕ್ಷಯ ನಗರ, ಪಜಿರಡ್ಕ, ಕಡಂಬು, ಕಂದೂರು ಹಾಗೂ ಇನ್ನೂ ಹಲವು ಕಡೆಗೆ ಸಾಗುವ ಮಾರ್ಗ ನಿಡಿಗಲ್- ಪಜಿರಡ್ಕ. ಇದೀಗ ಹದಗೆಟ್ಟ ರಸ್ತೆಯಿಂದಾಗಿ ಅಲ್ಲಿನ ನಾಗರಿಕರು ಪರದಾಡುವ ಸ್ಥಿತಿ ಬಂದೊದಗಿದೆ.

ಯಾವುದೇ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದರೂ ಯಾವುದೇ ಪರ್ಯಾಯ ರಸ್ತೆ ವ್ಯವಸ್ಥೆ ಇಲ್ಲದೆ ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದಾರೆ ಇಲ್ಲಿನ ಮತಹಾಕಿದ ಮತದಾರರು. ರಸ್ತೆ ಸರಿ ಮಾಡಿ ಕೊಡಿ ಎಂದು ವಿನಂತಿಸಿದ ಜನರಿಗೆ ಜನಪ್ರತಿನಿಧಿಯಿಂದ “ನಿಮಗೆ ಬೇಕಾದರೆ ನೀವೆ ಸರಿ ಮಾಡಿ” ಎಂಬ ಅಸಡ್ಡೆಯ ಉತ್ತರ ಬಂದಿದ್ದು, ನಡೆಯಲಿಕ್ಕೂ ಸಾಧ್ಯವಾಗದ ರಸ್ತೆಯಲ್ಲಿ ನಾಳೆ ಅಂದರೆ ಸೆ. 27ರ ಭಾನುವಾರ ಬೆಳಗ್ಗೆ 9.00 ಗಂಟೆಗೆ ಬಾಳೆಗಿಡ ನೆಟ್ಟು ವಿನೂತನವಾಗಿ ಪ್ರತಿಭಟಿಸುವ ಕಾರ್ಯಕ್ರಮ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.