ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಬಾಡಿಗೆದಾರರಿಂದ ರಮಾನಂದ ಸಾಲಿಯಾನ್‌ರಿಗೆ ಶ್ರದ್ಧಾಂಜಲಿ.

ಬೆಳ್ತಂಗಡಿ: ಇಲ್ಲಿಯ ಉದ್ಯಮಿ, ಸಮಾಜ ಸೇವಕ, ಅಣ್ಣಪೂರ್ಣ ಮೆಟಲ್ಸ್ ಮತ್ತು ರಾಜಾರಾಮ್ ಏಜೆನ್ಸಿಸ್‌ನ ಮಾಲಕ, ಶ್ರೀ ಗುರುನಾರಾಯಣ ಸೇವಾ ಸಂಘದ ಮಾಜಿ ಅಧ್ಯಕ್ಷ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಾಜ ಸೇವೆ ಗೈಯ್ಯುತ್ತಿದ್ದು, ಸೆ. 25 ರಂದು ದೈವಾಧೀನರಾದ ರಮಾನಂದ ಸಾಲಿಯಾನ್ ಅವರಿಗೆ, ಶ್ರೀ ಗುರು ನಾರಾಯಣ ಸ್ವಾಮಿ ಸಂಕೀರ್ಣದ ಎಲ್ಲಾ ಬಾಡಿಗೆ ದಾರರು ಸೆ. 26ರಂದು ಒಂದು ಗಂಟೆ ಬಂದ್ ಮಾಡುವ ಮೂಲಕ ಮೃತರಿಗೆ ಸಂತಾಪ ಸೂಚಿಸಿದರು. ಬಳಿಕ ಶ್ರೀ ನಾರಾಯಣ ಗುರು ಸಂಕೀರ್ಣದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮೃತರ ಸದ್ಗತಿಗಾಗಿ ಎಲ್ಲಾ ಬಾಡಿಗೆದಾರರು ಸೇರಿ ಒಂದು ನಿಮಿಷ ಮೌನ ಪ್ರಾರ್ಥನೆ ನಡೆಸಿದರು.

ಈ ಸಂದರ್ಭದಲ್ಲಿ ಶ್ರೀಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷ ವಕೀಲ ಭಗೀರಥ. ಜಿ, ಸುದ್ದಿ ಬಿಡುಗಡೆ ಬೆಳ್ತಂಗಡಿಯ ವ್ಯವಸ್ಥಾಪಕ ಮಂಜುನಾಥ ರೈ, ಬಾಡಿಗೆದಾರರಾದ ಕೇಶವ ಭಂಡಾರಿ, ಸಂಘದ ನಿರ್ದೇಶಕ ಮೊಬೈಲ್ ಪ್ಯಾಲೇಸ್‌ನ ಉಮೇಶ್, ಮೃತರ ಬಗ್ಗೆ ಮಾತನಾಡಿ ಸಂತಾಪ ವ್ಯಕ್ತಪಡಿಸಿದರು. ಬಾಡಿಗೆದಾರರಾದ ರಾಮದಾಸ ಪೈ, ಶೇಖರ ಪೂಜಾರಿ, ನಾರಾಯಣ ಪೈ, ಚಿದಾನಂದ ಇಡ್ಯ, ಗುರುದೇವ ಬ್ಯಾಂಕ್‌ನ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ಥ, ಪ್ರವೀಣ್ ಸೇರಿದಂತೆ ಎಲ್ಲಾ ಬಾಡಿಗೆದಾರರು ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.