ಬೆಳ್ತಂಗಡಿಯ ಹಿರಿಯ ಉದ್ಯಮಿ ರಮಾನಂದ ಸಾಲ್ಯಾನ್ ವಿಧಿವಶ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿಯ ಹಿರಿಯ ಉದ್ಯಮಿ ಹಾಗೂ ಸಮಾಜ ಸೇವಕ ರಮಾನಂದ ಸಾಲ್ಯಾನ್ ಅವರು ಅನಾರೋಗ್ಯದಿಂದ ಬಳಲಿ ಸೆ.25ರಂದು ಸಂಜೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.


ಇವರು ಬೆಳ್ತಂಗಡಿಯ ಅನ್ನಪೂರ್ಣ ಮೆಟಲ್ಸ್ ಮತ್ತು ರಾಜರಾಮ ಏಜನ್ಸೀಸ್‌ನ ಮಾಲಕರೂ, ಕೊಡುಗೈದಾನಿಯಾಗಿದ್ದು, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ, ಬೆಳ್ತಂಗಡಿ ತಾಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ, ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷರಾಗಿ, ಪಾಂಡುರಂಗ ಪ್ರತಿಷ್ಠಾನದ ಅಧ್ಯಕ್ಷರಾಗಿ, ವಿಶ್ವಪರಿಷತ್‌ನ ತಾಲೂಕು ಅಧ್ಯಕ್ಷರಾಗಿ, ಶ್ರೀರಾಮ ಶಿಲಾಪೂಜನ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ರೋಟರಿ ಕ್ಲಬ್‌ನ ಹಿರಿಯ ಸದಸ್ಯರಾಗಿ, ಸಂಸ್ಕಾರ ಭಾರತಿಯ ಅಧ್ಯಕ್ಷರಾಗಿ, ಬೆಳ್ತಂಗಡಿ ಶ್ರೀ ಗುರುರಾಘವೇಂದ್ರ ಮಠದ ಟ್ರಸ್ಟಿಯಾಗಿ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರೀಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ವಿವಿಧ ದೇವಸ್ಥಾನಗಳ ಜೀಣೋಧ್ದಾರ, ಬ್ರಹ್ಮಕಲಶೋತ್ಸವ ಸಮಿತಿಗಳ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಇವರು ಸಂಗೀತ ಕಲಾಪ್ರಿಯರಾಗಿದ್ದು, ಆಶಾ ಸಾಲಿಯಾನ್ ಪ್ರತಿಷ್ಠಾನವನ್ನು ಸ್ಥಾಪಿಸಿ ಸಂಗೀತ ಕಾರ್ಯಕ್ರಮಗಳನ್ನು ತಾಲೂಕಿನಲ್ಲಿ ಮಾಡಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರಲ್ಲದೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ಮೃತರು ಪುತ್ರ ರಾಘ್ನೇಶ್, ಪುತ್ರಿ ರೇಣು ಹಾಗೂ ಬಂಧು-ವರ್ಗದವರನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.

ನಾಳೆ ಅಂತ್ಯ ಸಂಸ್ಕಾರ: ಮೃತ ರಮಾನಂದ ಸಾಲ್ಯಾನ್ ಅವರ ಅಂತ್ಯ ಸಂಸ್ಕಾರ ನಾಳೆ (ಸೆ.26) ಬೆಳಿಗ್ಗೆ ಮುಂಡೂರು ಮೂಲ ಮನೆಯಲ್ಲಿ ನಡೆಯಲಿದೆ.

 

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.