ವೇಣೂರು: ಸ್ವಂತ ಸಹೋದರ ಹಾಗೂ ಸಂಬಂಧಿಯಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿಗಳ ಬಂಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಪ್ರಾಪ್ತ ಬಾಲಕರಿಬ್ಬರನ್ನು ವೇಣೂರು ಪೊಲೀಸರು ಬಂಧಿಸಿದ ಘಟನೆ ಸೆ.24ರಂದು ವರದಿಯಾಗಿದೆ. ಆರೋಪಿಗಳಾದ ಕೊಕ್ರಾಡಿ ನಿವಾಸಿ ಬಾಲಕಿಯ ಸಹೋದರ 17 ವಷ೯ದ ಅಪ್ರಾಪ್ತ  ಬಾಲಕ ಹಾಗೂ ಸಂಬಂಧಿ 16 ವಷ೯ದ ಶಿತಾ೯ಡಿಯ ಅಪ್ರಾಪ್ತ ಬಾಲಕರಿಬ್ಬರನ್ನು ಬಂಧಿಸಿ, ಠಾಣಾ ಅ.ಕ್ರ 56/2020 ಕಲಂ: 376 ಐ.ಪಿ.ಸಿ. ಮತ್ತು ಕಲಂ;4.6, ಪೋಕ್ಸೋ ಕಾಯ್ದೆ 2012 ರಂತೆ ಕೇಸು ದಾಖಲಿಸಲಾಗಿದೆ.

ಘಟನೆ ವಿವರ:14 ವಷ೯ದ ಬಾಲಕಿ ಸ್ಥಳೀಯ 8 ನೇ ತರಗತಿಯ ತನಕ ವಿದ್ಯಾಭ್ಯಾಸ ನಡೆಸಿ ಮನೆಯಲ್ಲಿ ತಂದೆ, ತಾಯಿ , ಅಕ್ಕ ಮತ್ತು ಅಣ್ಣನವರೊಂದಿಗೆ ವಾಸವಾಗಿರುವುದಾಗಿದ್ದು, ಬಾಲಕಿಯ ಮಾವನ ಮಗನಾದ ಶಿರ್ತಾಡಿಯ 16 ವರ್ಷದ ಆರೋಪಿ ಬಾಲಕ ಬಾಲಕಿಯ ಮನೆಗೆ ಆಗಾಗ ಬಂದು ಹೋಗುತ್ತಿದ್ದು , 2019 ಜು. 01 ರಂದು ಮನೆಗೆ ಬಂದ ಆತ ರಾತ್ರಿ ಉಳಕೊಂಡಿದ್ದು, ಮನೆಯವರೆಲ್ಲಾ ರಾತ್ರಿ ಊಟ ಮಾಡಿ ಮಲಗಿದ ನಂತರ ಲೈಂಗಿಕ ದೌರ್ಜನ್ಯ ನಡೆಸಿದ ಎಂದು ಆರೋಪಿಸಲಾಗಿದೆ. ಅದೇ ರೀತಿ 2020 ಫೆ.10 ರಂದು ರಾತ್ರಿ ಊಟದ ಬಳಿಕ ಆರೋಪಿ ಆಕೆಯ ಸಹೋದರ 17 ವಷ೯ದ ಬಾಲಕ ರಾತ್ರಿ ಸುಮಾರು 10.30 ಗಂಟೆಗೆ ಬಾಲಕಿ ನಿರಾಕರಿಸಿದರೂ ಒತ್ತಾಯ ಪೂರ್ವಕವಾಗಿ ಲೈಂಗಿಕ ದೌರ್ಜನ್ಯ ನಡೆಸಿದನೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಆಕೆಯ ದೈಹಿಕ ಬದಲಾವಣೆಯನ್ನು ಗಮನಿಸಿದ ತಾಯಿ ಮತ್ತು ಅಕ್ಕನಲ್ಲಿ ತಿಳಿಸಿ ಅವರೊಂದಿಗೆ  ಸರಕಾರಿ ಆಸ್ಪತ್ರೆಗೆ ಹೋದಾಗ ಅಲ್ಲಿ ವೈದ್ಯರು ಪಿರ್ಯಾದಿದಾರರನ್ನು ಪರೀಕ್ಷಿಸಿ  ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿತ್ತು. ಕಾಯಾ೯ಚರಣೆ ನಡೆಸಿದ ಪೊಲೀಸ್ ರು ಪ್ರಕರಣ ದಾಖಲಾಗಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.