ಶ್ರೀ ವಿಷ್ಣುಮೂರ್ತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಟ್ಟೂರು ಇದರ ಹಿಂದಿನ ಆಡಳಿತ ಸಮಿತಿಗೆ ಶಾಲಾ ಸ್ವೀಕಾರ ಪತ್ರ ನೀಡಿ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

1955ರಲ್ಲಿ ಪ್ರಾರಂಭವಾದ ಶ್ರೀ ವಿಷ್ಣುಮೂರ್ತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಟ್ಟೂರು ರನ್ನು 2011ರಲ್ಲಿ ದಾನ ಸ್ವರೂಪದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.)ಗೆ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ಸಹಯೋಗದೊಂದಿಗೆ ಶಾಲೆಯನ್ನು ಶ್ರೀ ಕೃಷ್ಣಮೂರ್ತಿ ಭಟ್ ರವರು ಹಸ್ತಾಂತರಿಸಿದ್ದರು. ಪ್ರಸ್ತುತ ಶ್ರೀರಾಮ ವಿದ್ಯಾಸಂಸ್ಥೆಯಾಗಿ ವಿದ್ಯಾರ್ಥಿಗಳಿಗೆ ಪ್ರೌಢಶಾಲೆವರೆಗಿನ ಶಿಕ್ಷಣ ನೀಡುತ್ತಿದೆ. ಹಾಗೂ ಸುತ್ತಮುತ್ತಲಿನ 12 ಗ್ರಾಮಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಮಾತೃಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಸ್ಥಳೀಯ ಆಡಳಿತ ಸಮಿತಿ ಶಾಲೆಯನ್ನು ಹಸ್ತಾಂತರಿಸಿದ ಶ್ರೀಮತಿ/ಶ್ರೀ ಕೃಷ್ಣಮೂರ್ತಿ ಭಟ್ ದಂಪತಿಗಳಿಗೆ ಹಾಗೂ ಶಾಲೆಯಲ್ಲಿ ಶಿಕ್ಷಕರಾಗಿ ಸುಧೀರ್ಘ ಸೇವೆ ಸಲ್ಲಿಸಿದ ಶ್ರೀ ಚಂದ್ರಶೇಖರ ಭಟ್ ರನ್ನು ಸನ್ಮಾನಿಲು ಮತ್ತು ಶಾಲಾ ಸ್ವೀಕಾರ ಪತ್ರವನ್ನು ನೀಡಲು ಅವರ ಸ್ವಗೃಹ ಕಳಂದೂರಿಗೆ ತೆರಳಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.)ನ ಪ್ರತಿನಿಧಿ ಹಾಗೂ ಸರಸ್ವತಿ ವಿದ್ಯಾಲಯ ಕಡಬ ಇದರ ಸಂಚಾಲಕರಾದ ಶ್ರೀ ವೆಂಕಟರಮಣ ರಾವ್ ಮಂಕುಡೆ ಇವರು ಶಾಲು ಹೊದಿಸಿ ಸನ್ಮಾನಿಸಿದರು. ಹಾಗೂ ಆಡಳಿತ ಸಮಿತಿಯ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ದೇರಾಜೆ ಶಾಲಾ ಸ್ವೀಕಾರ ಪತ್ರ ನೀಡುವ ಮೂಲಕ ಹಾಗೂ ಶಾಲಾ ಆಡಳಿತ ಸಮಿತಿಯ ಸದಸ್ಯರಾದಚಂದ್ರಶೇಖರ ಗೌಡ ಧರ್ಮದಕಲ ಫಲವಸ್ತುಗಳನ್ನು ನೀಡುವ ಮೂಲಕ ಗೌರವಿಸಿದರು. ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶ್ರೀ ಚಂದ್ರಶೇಖರ ಭಟ್ ರಿಗೆ ಕೊರಗಪ್ಪ ಶೆಟ್ಟಿ ಮುಂಡ್ರೇಲು ಇವರು ಸ್ಮರಣಿಕೆ ನೀಡುವ ಮೂಲಕ ಗೌರವಿಸಿದರು. ಸದಸ್ಯರಾದ ಪುರಂದರ ಕಡೀರ, ಗಣೇಶ್ ಕೆ. ಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೇಟ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.