ಪತ್ರಕರ್ತೆ ಸಫಿಯಾರವರಿಗೆ ಮಂಗಳೂರು ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ಉಪನ್ಯಾಸಕಿಯಾಗಿ ಕರ್ತವ್ಯ ಸಲ್ಲಿಸುತ್ತಿರುವ ಪತ್ರಕರ್ತೆ ಡಾ.ಸಫಿಯಾರವರಿಗೆ ಮಂಗಳೂರು ವಿಶ್ವ ವಿದ್ಯಾಲಯವು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಪ್ರೊ. ವಹೀದಾ ಸುಲ್ತಾನರವರ ಮಾರ್ಗದರ್ಶದಲ್ಲಿ, `ಕರ್ನಾಟಕದ ಮಾಧ್ಯಮ ವೃತ್ತಿಪರರಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ’ ಎಂಬ ಶೀರ್ಷಿಕೆಯಡಿಯಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಗೆ ಆಯ್ಕೆ ಮಾಡಿದೆ.

ಡಾ.ಸಫಿಯಾರವರು ವೇಣೂರು ವಿದ್ಯೋದಯ ಹೈಯರ್ ಫ್ರೈಮರಿ ಶಾಲೆ, ಪೆರಿಂಜೆ ಎಸ್.ಡಿ.ಎಮ್. ಫ್ರೌಢ ಶಾಲೆ, ವೇಣೂರು ಸರಕಾರಿ ಪದವಿ ಪೂರ್ವ ಕಾಲೇಜು, ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾರ್ಜನೆ ಮಾಡಿದ್ದಾರೆ. ಇವರು ನಈಮ್ ಸಿದ್ದೀಖಿಯವರ ಪತ್ನಿ, ದಿ. ಎಂ. ಅಬ್ದುಲ್ ಹಮೀದ್ ವೇಣೂರು ಮತ್ತು ರಾಬಿಯಮ್ಮ ದಂಪತಿಗಳ ಪುತ್ರಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.