ಅಂಬ್ಯೂಲೆನ್ಯ್ ಚಾಲಕನ ಪ್ರಾಮಾಣಿಕತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಎಟಿಎಂ ತಾಂತ್ರಿಕ ದೋಷ ಕಳಕೊಂಡ 10,000 ವನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಿದ ಅಂಬ್ಯುಲೆನ್ಸ್ ಚಾಲಕ ಹಮೀದ್

ಸಿ.17 ರಂದು ಮುಂಡೂರು ನಿವಾಸಿ ಪಿಗ್ಮಿ ಕಲೆಕ್ಟರ್ ರಾಜೇಶ್ ಬೆಳ್ತಂಗಡಿ ಎಸ್ ಬಿ ಐ ಎಟಿಎಂ ನಿಂದ 10,000 ಹಣ ತೆಗೆಯಲು ನಂಬರ್ ಒತ್ತಿ ಕೆಲ ಸಮಯವಾದರೂ ಹಣ ಬಾರದಾಗ ಹಿಂತಿರುಗಿ ತಾನು ಖಾತೆ ಹೊಂದಿರುವ ಕೆನರಾ ಬ್ಯಾಂಕ್ ಮ್ಯಾನೆಜರ್ ಗೆ ದೂರು ಸಲ್ಲಿಸಿದಾಗ ಅವರು ಪರಿಶೀಲಿಸಿ ಹಣ ಖಾತೆಯಿಂದ ಕಡಿತಗೊಂಡಿದೆ ಯಾರೋ ತಕೊಂಡು ಹೋಗಿರಬೇಕು ಎಂದಿರುತ್ತಾರೆ.ಈ ಬಗ್ಗೆ‌ ರಾಜೇಶ್ ರವರು SBI ಬ್ಯಾಂಕ ಲ್ಲಿ ವಿವರಿಸಿದರೂ ಪ್ರಯೋಜನವಾಗದೆ ಬೆಳ್ತಂಗಡಿ ಠಾಣೆಗೆ ಸೆ18ರಂದು ದೂರು ನೀಡಿರುತ್ತಾರೆ.

ಸದ್ರಿ ಅರ್ಜಿಯನ್ನು ಠಾಣಾ ಪ್ರಭಾರದಲ್ಲಿದ್ದ ಸಿಬ್ಬಂದಿ ವೆಂಕಪ್ಪರವರು ಪರಿಶೀಲನೆ ಗಾಗಿ ಸ್ಟೇಟ್ ಬ್ಯಾಂಕ್ ಬೆಳ್ತಂಗಡಿ ಶಾಖೆಗೆ ಹೋಗಿ ವಿಚಾರಿಸಿದಾಗ .ರಾಜೇಶ್ ರವರು ಎಟಿಎಂ ನಿಂದ ಹೊರಗೆ ಬಂದ ನಂತರ ಹೋದ ಗ್ರಾಹಕ ಹಮೀದ್ ಎಂಬವರು ಸದ್ರಿ 10,000 ಹಣ ಸಿಕ್ಕಿದ್ದು ಯಾರಾದರೂ ಬಂದು ಕೇಳಿದ್ದಲ್ಲಿ ಅವರ ವಿಸಿಟಿಂಗ್ ಕಾರ್ಡ್ ನೀಡಿರುವುದು ತಿಳಿಯಿತು.ಈ ಬಗ್ಗೆ ಹಮೀದ್ ರವರು ನಾನು ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಯಲ್ಲಿ ಅಂಬ್ಯುಲೆನ್ಸ್ ಚಾಲಕ ಎಂದು ತಿಳಿಸಿದಂತೆ ಪೊಲೀಸರು ರಾಜೇಶ್ ರನ್ನು ಕರೆಯಿಸಿದಾಗ 10,000 ವನ್ನು ಹಮೀದ್ ರವರು ರಾಜೇಶ್ ಗೆ ಹಸ್ತಾಂತರಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.