HomePage_Banner_
HomePage_Banner_

ಬೆಳ್ತಂಗಡಿ ಜಾಮಿಯಾ ಮಸ್ಜಿದ್ ವತಿಯಿಂದ ಸರಕಾರಿ ಸವಲತ್ತುಗಳ‌ ಮಾಹಿತಿ; ಸಾಧಕರಿಗೆ ಸನ್ಮಾನ

ಬೆಳ್ತಂಗಡಿ: ಇಲ್ಲಿನ‌ ಕೋರ್ಟ್ ರಸ್ತೆಯಲ್ಲಿರುವ ಗೌಸಿಯಾ ಜಾಮಿಯಾ ಮಸ್ಜಿದ್ ಇದರ ವತಿಯಿಂದ ಜಮಾಅತ್ ಬಾಂಧವರಿಗೆ ಸರಕಾರಿ ಸವಲತ್ತುಗಳ ‌ಮಾಹಿತಿ ಮತ್ತು ಅರ್ಜಿ ಸಲ್ಲಿಕೆ ಕಾರ್ಯಕ್ರಮ,‌ ಸಾಧಕರಿಗೆ ಸನ್ಮಾನ‌ ಸಮಾರಂಭ ಸೆ.17 ರಂದು ನೆರವೇರಿತು.

ಇನ್ಫೋಮೇಟ್ ಫೌಂಡೇಶನ್ ವತಿಯಿಂದ ಸಂಪನ್ಮೂಲ ವ್ಯಕ್ತಿಯಾಗಿ ಸಂಸ್ಥೆಯ ನಿರ್ದೇಶಕ ಅಬ್ದುಲ್ ಖಾದರ್ ನಾವೂರು ಭಾಗವಹಿಸಿ ಅಲ್ಪಸಂಖ್ಯಾತರ ಇಲಾಖೆ, ಅಲ್ಪಸಂಖ್ಯಾತರ ನಿಗಮದ ಮೂಲಕ‌ ಸಮುದಾಯಕ್ಕೆ ಮೀಸಲಿರುವ ಯೋಜನೆಗಳು, ಕರ್ನಾಟಕ ವಕ್ಫ್ ಇಲಾಖೆಯ ಯೋಜನೆಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇನ್ನಿತರ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಅಲ್ ಖಾದಿಸಾ ವಿದ್ಯಾ ಸಂಸ್ಥೆ ಕಾವಳಕಟ್ಟೆ ಇದರ ಚೆಯರ್ಮೇನ್, ಖ್ಯಾತ‌ ಅಂತಾರಾಷ್ಟ್ರೀಯ ವಿದ್ವಾಂಸ ಹಝ್ರತ್ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಕಾರ್ಯಕ್ರಮ ಉದ್ಘಾಟಿಸಿದರು.

ಇದೇ ವೇಳೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ನಡ ಸರಕಾರಿ ಪ್ರೌಢ ಶಾಲಾ ಶಿಕ್ಷಕ ಯಾಕೂಬ್ ಎಸ್ ಕೊಯ್ಯೂರು ರವರಿಗೆ ಸನ್ಮಾನ ನಡೆಯಿತು. ಗೌಸಿಯಾ ಜಾಮಿಯಾ ಮಸ್ಜಿದ್ ಅಧ್ಯಕ್ಷ ಮುಹಮ್ಮದ್ ರಫಿ ಕಾರ್ಯಕ್ರಮ ಸಂಯೋಜಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.