HomePage_Banner_
HomePage_Banner_

ಬೆಳಾಲು ಎಟ್ರಾಸಿಟಿ ಪ್ರಕರಣ: ಡಿವೈಎಸ್‌ಪಿ ಯಿಂದ ಸ್ಥಳ ತನಿಖೆ; ಬೀಡಿ ಬ್ರಾಂಚ್ ಮಾಲಕನ ಪರ ಹೇಳಿಕೆ‌ ನೀಡಿದ ಮಹಿಳೆಯರು!

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳಾಲು‌ ಗ್ರಾಮದ ಸುರುಳಿ ಎಂಬಲ್ಲಿ  ದಲಿತ ಯುವತಿಗೆ ಲೈಂಗಿಕ ಕಿರುಕುಳ‌ ನೀಡಿದ ಆರೋಪದಲ್ಲಿ ಬೀಡಿ ಬ್ರಾಂಚ್ ಮಾಲಕ ಸಲೀಂ ಎಂಬವನ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿಯೂ ಪ್ರಕರಣ ದಾಖಲಾಗಿದ್ದು, ಆ ಹಿನ್ನೆಲೆಯಲ್ಲಿ ಪ್ರಕರಣದ ತನಿಖಾಧಿಕಾರಿಯೂ ಆಗಿರುವ ಡಿವೈಎಸ್‌ಪಿ ಅವರು ನಹಜರು‌ನಡೆಸಿ ಸಂತೃಸ್ತೆ ಮತ್ತು ಅವರ ಮನೆಯವರ ಹೇಳಿಕೆ ದಾಖಲಿಸಿಕೊಂಡರು.ತಾಲೂಕು ವ್ಯಾಪ್ತಿಯಲ್ಲಿ ನಡೆದ ಎರಡು ಮಾನಭಂಗ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾ ಅವರು ಸೆ. 12 ರಂದು ಸ್ಥಳ ತನಿಖೆ ನಡೆಸಿ ಹೇಳಿಕೆಗಳನ್ನು ದಾಖಲಿಸಿದರು.

ನಾಲ್ಕು ಮಂದಿಯ ವಿರುದ್ದ ಪ್ರತಿ ದೂರು ಕೇಸು;
ಘಟನೆಯ ದಿನ ಸಲೀಂ ಅವರ ಜೊತೆಗಿದ್ದ ಸಹೋದರ ಮುಹಮ್ಮದ್ ಶರೀಫ್ ಅವರು ಧರ್ಮಸ್ಥಳ ಟಾಣೆಗೆ ಪ್ರತಿದೂರು ನೀಡಿದ್ದು, ನಾವು ಸಹೋದರರಿಬ್ಬರು ಬೀಡಿ ತೆಗೆಯಲು ಹೋಗಿದ್ದ ವೇಳೆ ಏಳೆಂಟು ಮಂದಿಯ ತಂಡ ಅಣ್ಣ ಸಲೀಂ ರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ನಡೆಸಿದ್ದಾರೆ ಎಂದು ಆಪಾದಿಸಿದ್ದಾರೆ.‌ಆ ಹಿನ್ನೆಲೆಯಲ್ಲಿ ಬೆಳಾಲು ಗ್ರಾಮದ ರಮೇಶ್‌ ಮನ್ನಾಜೆ, ವಸಂತ, ಪ್ರಸಾದ, ರಮಿತ್‌ ಎಂಬವರು ಹಾಗೂ ಇತರರು ಎಂದು ಧರ್ಮಸ್ಥಳ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ‌.

ಸ್ಥಳ ತನಿಖೆ ಬಳಿಕ ಮಾದ್ಯಮಕ್ಕೆ ಹೇಳಿಕೆ ನೀಡಿದ ಡಿವೈಎಸ್‌ಪಿ ವೇಲೆಂಟೈನ್ ಡಿಸೋಜಾ, ಪ್ರಕರಣದ ತನಿಖೆ ಮುಂದುವರಿಯುತ್ತಿದ್ದು, ಹೇಳಿಕೆ ಮತ್ತು ಸ್ಥಳಮಹಜರು ಪ್ರಕ್ರಿಯೆ ನಡೆದಿದೆ. ಈ ಪ್ರಕರಣದಲ್ಲಿ ಮಹಿಳೆಯರೂ ಸೇರಿದಂತೆ ಊರವರು ಆರೋಪಿ ಪರವಾಗಿ ಹೇಳಿಕೆ ನೀಡಿದ್ದು ಅದನ್ನು ತನಿಖೆಯ‌ಭಾಗವಾಗಿ ದಾಖಲಿಸಿಕೊಳ್ಳಲಾಗಿದೆ. ಸಮಗ್ರ ತನಿಖೆ ಮುಂದುವರಿಯಲಿದೆ ಎಂದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.