HomePage_Banner_
HomePage_Banner_

ಬೆಳಾಲಿನ ಸುರುಳಿ, ಉಜಿರೆ ನಿನ್ನಿಕಲ್ಲು ಘಟನೆಗಳ ಸತ್ಯಶೋಧನೆಗೆ ನ್ಯಾಯಾಧೀಶರ ನೇತೃತ್ವದ ತನಿಖಾ ತಂಡ ರಚನೆಗೆ ಮುಸ್ಲಿಂ ಸಂಘಟನೆಗಳ ಆಗ್ರಹ

ಬೆಳ್ತಂಗಡಿ: ಬೆಳಾಲು ಗ್ರಾಮದ ಸುರುಳಿ, ಉಜಿರೆ ಗ್ರಾಮದ ನಿನ್ನಿಕಲ್ಲು ಪ್ರದೇಶದಲ್ಲಿ ಇತ್ತೀಚೆಗೆ ಎರಡು ವಾರಗಳ ಅಂತರದಲ್ಲಿ ನಡೆದ ಎರಡು ಘಟನೆಗಳಲ್ಲಿ ಮುಸ್ಲಿಂ ಸಮಾಜದ ಯುವಕರ ಬಗ್ಗೆ ವ್ಯವಸ್ಥಿತವಾದ ಶಡ್ಯಂತ್ರದ ಮೂಲಕ ಸುಳ್ಳು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ನೈತಿಕ ಪೊಲೀಸ್‌ಗಿರಿ ಕೂಡ ಮಾಡಲಾಗಿದೆ.ಇದರ ಸತ್ಯಶೋಧನೆಗಾಗಿ ತಾಲೂಕು ಆಡಳಿತದಿಂದ ನ್ಯಾಯಾಧೀಶರ ನೇತೃತ್ವದ ವಿಶೇಷ ತಂಡ ರಚಿಸುವಂತೆ ತಾಲೂಕು ಮುಸ್ಲಿಂ ಸಂಘಟನೆಗಳ ಸಂಯುಕ್ತ ಒಕ್ಕೂಟ ಒತ್ತಾಯಿಸುತ್ತದೆ ಎಂದು ಎಸ್.ಡಿ.ಪಿ.ಐ ತಾಲೂಕು ಅಧ್ಯಕ್ಷ ಹೈದರ್ ನೀರ್ಸಾಲ್ ಹೇಳಿದರು. ಅವರು ಸೆ.೧೬ ರಂದು ಬೆಳ್ತಂಗಡಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಎರಡೂ ಘಟನೆಯಲ್ಲಿ ದಲಿತ ಸಮಾಜದ ಯುವತಿಯರನ್ನು ಬಳಕೆ ಮಾಡಿಕೊಳ್ಳಲಾಗಿದ್ದು, ಇದು ಪೂರ್ವಸಿದ್ಧತೆ ನಡೆಸಿಕೊಂಡಿದ್ದಂತೆ ಇರುವ ಆರ್.ಎಸ್.ಎಸ್ ಪ್ರೇರಿತ ದಾಳಿನಡೆಸಿ ನೈತಿಕ ಪೊಲೀಸ್‌ಗಿರಿ ಮಾಡಿದ್ದಾರೆ.

ಸುರುಳಿಯಲ್ಲಿ ನಡೆದ ಪ್ರಕರಣದ ಬಳಿಕ ತನಿಖಾಧಿಕಾರಿ ಬಂಟ್ವಾಳ ಡಿವೈಎಸ್‌ಪಿ ಅವರ ಬಳಿ ನೂರರಷ್ಟು ಹಿಂದೂ ಮಹಿಳೆಯರೂ ಸೇರಿದಂತೆ ನಾಗರಿಕರು ಘಟನೆ ಬಗ್ಗೆ ಸಂದೇಹ ವ್ಯಕ್ತಪಡಿಸಿ, ಬೀಡಿ ಬ್ರಾಂಚ್ ಮಾಲಕರ ಪರ ಹೇಳಿಕೆ ನೀಡಿದ್ದಾರೆ. ಈ ಎರಡೂ ಪ್ರಕರಣಗಳ ಬಗ್ಗೆ ಸತ್ಯಶೋಧನೆ ನಡೆಸಿ ಇದರ ಹಿಂದೆ ಇರುವ ನೈಜ ಕಾರಣವನ್ನು ಬಹಿರಂಗಪಡಿಸಬೇಕು ಎಂದರು.

ಸ್ಥಳೀಯ ಸಂಸ್ಥೆ ಚುನಾವಣೆಗಳು ಹತ್ತಿರ ಬರುತ್ತಿರುವಂತೆಯೇ ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಂಡು ಈ ರೀತಿಯ ಶಡ್ಯಂತ್ರ ನಡೆಯುತ್ತಿದೆ. ಮಾಹಿತಿಯೊಂದರ ಪ್ರಕಾರ
ಸಂಘ ಪರಿವಾರದ ವಿವಿಧ ಜವಾಬ್ಧಾರಿಗಳನ್ನು ವಿಂಗಡಿಸಿ ಸಮಿತಿಗಳನ್ನು ರಚಿಸಲಾಗಿದ್ದು, ಆ ತಂಡದ ಮೂಲಕ ಮುಸ್ಲಿಂ ಸಮಾಜದ ಮೇಲೆ ನಿರಂತರವಾಗಿ ಹಲ್ಲೆ, ಸುಳ್ಳು ಆಪಾದನೆ, ಸುಳ್ಳು ಕೇಸುಗಳಲ್ಲಿ ಸಿಲುಕಿಸುವುದು, ದೌರ್ಜನ್ಯ ನಡೆಸುವುದು ನಡೆಯುತ್ತಿದೆ ಎಂಬ ಗುಮಾನಿ ಇದೆ. ಈ ಬಗ್ಗೆ ಪೊಲೀಸ್ ಗುಪ್ತಚರ ಇಲಾಖೆ ಸೂಕ್ತ ತನಿಖೆ ಕೈಗೊಳ್ಳಬೇಕು. ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ ಮುಂದಕ್ಕೆ ಮುಸ್ಲಿಂ ಸಂಘಟನೆಗಳ ಸಂಯುಕ್ತ ಒಕ್ಕೂಟದ ವತಿಯಿಂದ ತಾಲೂಕು ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಜಮಾಅತ್ ತಾಲೂಕು ಅಧ್ಯಕ್ಷ ಎಸ್.ಎಂ ಕೋಯ ಉಜಿರೆ, ಎಸ್.ಎಮ್.ಎ ರಾಜ್ಯ ಕಾರ್ಯದರ್ಶಿ ಸಾದಿಕ್ ಮಲೆಬೆಟ್ಟು, ರಾಜ್ಯ ಉಪಾಧ್ಯಕ್ಷ ಎ.ಕೆ ಅಹಮದ್, ಮುಸ್ಲಿಂ ಜಮಾಅತ್ ತಾಲೂಕು ಕಾರ್ಯದರ್ಶಿ ಮುಹಮ್ಮದ್ ರಫಿ, ತಾ.ಮುಸ್ಲಿಂ ಒಕ್ಕೂಟದ ಅಧ್ಯಕ್ಷ ನಝೀರ್ ಬಿ.ಎ, ತಾ| ಸುನ್ನಿ ಸಂಯುಕ್ತ ಜಮಾಅತ್ ಕಾರ್ಯದರ್ಶಿ ಹಾಜಿ ಅಬ್ದುಲ್ ರಝಾಕ್ ಸಖಾಫಿ, ಸಾಮಾಜಿಕ ಕಾರ್ಯಕರ್ತರಾದ ಅಕ್ಬರ್ ಸಂಜಯನಗರ, ಅಬ್ದುಲ್ ಹಕೀಂ ನೆರಿಯ, ಅಬ್ದುಲ್ ರಹಮಾನ್ ಕಕ್ಕಿಂಜೆ, ಎಸ್.ಕೆ.ಎಸ್ಸೆಸ್ಸೆಫ್ ಬೆಳ್ತಂಗಡಿ ವಲಯ ಉಪಾಧ್ಯಕ್ಷ ರಝಾಕ್ ಕನ್ನಡಿಕಟ್ಟೆ, ತಾ.ಮುಸ್ಲಿಂ ಐಖ್ಯತಾ ವೇದಿಕೆ ಅಧ್ಯಕ್ಷ ಸಲೀಂ ಗುರುವಾಯನಕೆರೆ, ಎಸ್.ಎಂ.ಎ ರಾಜ್ಯ ಉಪಾಧ್ಯಕ್ಷ ಎ.ಕೆ ಅಹಮ್ಮದ್ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.