HomePage_Banner_
HomePage_Banner_

ವಿವಿಧೋದ್ದೇಶ ಸಹಕಾರ ಸಂಘ (ನಿ)ಬೆಳ್ತಂಗಡಿ ಇದರ ವತಿಯಿಂದ ಬ್ಯಾಂಕ್ ಸಿಬ್ಬಂದಿಗಳಿಗೆ ಮತ್ತು ಪಿಗ್ಮಿಯ ಏಜೆಂಟರಿಗೆ ದಕ್ಷತಾ ಕಾರ್ಯಗಾರ

ಬೆಳ್ತಂಗಡಿ ತಾಲೂಕು ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ (ನಿ)ಬೆಳ್ತಂಗಡಿ ಇದರ ವತಿಯಿಂದ ಬ್ಯಾಂಕ್ ಸಿಬ್ಬಂದಿಗಳಿಗೆ ಮತ್ತು ಪಿಗ್ಮಿಯ ಏಜೆಂಟರಿಗೆ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ದಕ್ಷತಾ ಕಾರ್ಯಗಾರ ಏರ್ಪಡಿಸಲಾಗಿತ್ತು. ಈ ಕಾರ್ಯಗಾರವನ್ನು ಭೂ ಅಭಿವೃದ್ಧಿ ಬ್ಯಾಂಕ್ ಬೆಳ್ತಂಗಡಿ ಇದರ ನಿರ್ದೇಶಕರಾದ ಕರಿಯ ನಾಯ್ಕ ಧರ್ಮಸ್ಥಳ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಶುಭ ಕೋರಿದರು.ಲಾಂಪ್ಸ್ ನ ಮಾಜಿ ನಿರ್ದೇಶಕರು ಹಾಗೂ ಧರ್ಮಸ್ಥಳ ಜಿಲ್ಲಾ ಪಂಚಾಯತಿ ಸದಸ್ಯರಾದ ಕೊರಗಪ್ಪ ನಾಯ್ಕ ಮುಂಡಾಜೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಘದ ಬೆಳವಣಿಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ,ಮತ್ತು ಸೋಮಂದಡ್ಕ ಶಾಖೆಯಲ್ಲಿ ಸ್ವಂತ ಕಟ್ಟಡ ಮಾಡುವ ಬಗ್ಗೆ ಲ್ಯಾಂಪ್ಸ್ ಅಧ್ಯಕ್ಷ ರಿಗೆ ಮನವಿ ಮಾಡಿದರು, ಲ್ಯಾಂಪ್ಸ್ ಸಹಕಾರಿ ಸಂಘದ ಅಧ್ಯಕ್ಷರಾದ ಲಿಂಗಪ್ಪ ನಾಯ್ಕ ಉರುವಾಲು ಇವರು ಪಿಗ್ಮಿ ಸಂಗ್ರಹಗಾರರಿಗೆ ಪಿಗ್ಮಿ ಮಿಷನ್ ನೀಡಿ ಅಧ್ಯಕ್ಷ ಸ್ಥಾನ ದಿಂದ ಮಾತನಾಡುತ್ತಾ ನಮ್ಮ ಬೆಳ್ತಂಗಡಿ ಲ್ಯಾಂಪ್ಸ್ ಸಹಕಾರಿ ಸಂಘ ಶಿಶಿಲ, ಮುಂಡಾಜೆ, ಉಜಿರೆ ಮೂರು ಶಾಖೆಗಳನ್ನು ಹೊಂದಿರುತ್ತದೆ. ಬೆಳ್ತಂಗಡಿ ಕೇಂದ್ರ ಕಚೇರಿ ಆಗಿರುತ್ತದೆ‌. ನಮ್ಮ ಸಹಕಾರಿ ಸಂಘದ ಸಿಬ್ಬಂದಿ ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ನನಗೆ ಸಂತಸ ತಂದಿದೆ ಇತ್ತೀಚೆಗೆ ಕೇಂದ್ರ ಮತ್ತು ಎಲ್ಲ ಶಾಖೆಗಳಿಗೆ ಕಂಪ್ಯೂಟರ್ ಅಳವಡಿಸಿದ್ದೇವೆ, ಇಂದು ನಮ್ಮ ಬ್ಯಾಂಕಿನ ಎಲ್ಲ ಪಿಗ್ಮಿ ಸಂಗ್ರಹಗಾರರಿಗೆ ಆಧುನಿಕ ರೀತಿಯ ಪಿಗ್ಮಿ ಮಿಷನ್ನಿನ ವ್ಯವಸ್ಥೆಯನ್ನು ಸಹಕಾರಿ ಸಂಘದಿಂದ ನೀಡಿರುತ್ತೇವೆ.ಇಂದು ನಮ್ಮ ಸಹಕಾರಿ ಸಂಘ ಗಿರಿಜನರಾದ ಅಭಿವೃದ್ಧಿಗಾಗಿ ಅವರ ಕಾಡಿನ ಬದುಕಿಗೆ ಪೂರಕವಾಗಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸ್ಥಾಪಿತವಾದ ವಿವಿದೋದ್ದೇಶ ಸಹಕಾರಿ ಸಂಘ ನಮ್ಮ ಆದಿವಾಸಿ ಸಮುದಾಯಕ್ಕೆ ಸೇರಿದ ಜನಾಂಗದ ಹೆಮ್ಮೆಯ ಸಂಸ್ಥೆ ಯಾಗಬೇಕು ಮತ್ತು ಅಧ್ಯಕ್ಷನಾಗಿ ನಾನು ಹಲವು ಯೋಜನೆಗಳನ್ನು ತಂದು ನಮ್ಮ ಸಂಘದ ಸದಸ್ಯರಿಗೆ ಅಭಿವೃದ್ಧಿಗೆ ಪೂರಕವಾಗುವ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇನೆ. ಎಂದು ಹೇಳಿ ಲ್ಯಾಂಪ್ಸ್ ಸಹಕಾರಿ ಸಂಘದ ಇತ್ತೀಚಿಗಿನ ಕೆಲಸ-ಕಾರ್ಯಗಳ ಬಗ್ಗೆ ಮಾಹಿತಿ ನೀಡಿ ಬ್ಯಾಂಕಿನ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವೆಂದು ಹೇಳಿ ಕಾರ್ಯಕ್ರಮಕ್ಕೆ ಶುಭಕೋರಿದರು .. ಈ ಕಾರ್ಯಕ್ರಮದಲ್ಲಿ  ಸಂಘದ ಕಾರ್ಯದರ್ಶಿ ನೀನ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಉಪಾಧ್ಯಕ್ಷರಾದ ಸಂತೋಷ ನಾಯ್ಕ ಅತ್ತಾಜೆ ಇವರು ಧನ್ಯವಾದವಿತ್ತರು ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಚೆನ್ನಕೇಶವ ಅರಸ ಮಜಲು ತಿಮ್ಮಪ್ಪ ನಾಯ್ಕ, ಪ್ರಶಾಂತ್ ನಾಯ್ಕ, ಸೀತಾರಾಮ್.ಬಿ.ಎಸ್, ಜಯಲಕ್ಷ್ಮಿ ಶ್ರೀಮತಿ ಲಲಿತ ಮತ್ತು ಮಾಜಿ ನಿರ್ದೇಶಕ ಶಾಂತಪ್ಪ ಉಪಸ್ಥಿತರಿದ್ದರು, ಸಿಬ್ಬಂದಿ ವರ್ಗದವರು ಮತ್ತು ಪಿಗ್ಮಿ ಏಜೆಂಟರು ದಕ್ಷತಾ ಕಾರ್ಯಗಾರದಲ್ಲಿ ಭಾಗವಹಿಸಿದರು. ಮತ್ತು ಶಿಶಿಲ ಶಾಖೆಯ ವ್ಯವಸ್ಥಾಪಕರಾದ ಚಿದಾನಂದ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.