ಕುಸಿಯುವ ಹಂತದಲ್ಲಿರುವ ಕೊಯ್ಯೂರು ಬಸ್ ತಂಗುದಾಣ

ಕೊಯ್ಯೂರು: ಇಲ್ಲಿನ ಗ್ರಾ.ಪಂ. ಆಡಳಿತಕ್ಕೆ ಒಳಪಟ್ಟ ಪಂಚಾಯತ್ ಪಕ್ಕದಲ್ಲಿರುವ ಆದೂರ್‌ಪೇರಾಲ್ ಬಸ್ ತಂಗುದಾಣ ಹಲವಾರು ವರ್ಷದಿಂದ ಸಾರ್ವಜನಿಕರಿಗೆ ಉಪಯೋಗವಾಗುತ್ತಿತ್ತು. ಆದರೆ ಇತ್ತೀಚೆಗೆ ಅದರ ಎದುರಿಗೆ ಇದ್ದ ಮರವನ್ನು ತೆರವುಗೊಳಿಸುವ ಸಂದರ್ಭದಲ್ಲಿ ಬಸ್ ತಂಗುದಾಣದ ಮೇಲೆ ಮರದ ಕೊಂಬೆ ಬಿದ್ದು ಕಟ್ಟಡಕ್ಕೆ ಹಾನಿಯಾಗಿದೆ.


ತಿಂಗಳು ಕಳೆದರೂ ಪಂಚಾಯತ್ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ಈ ನಿರ್ಲಕ್ಷದಿಂದಾಗಿ ಸಾರ್ವಜನಿಕರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ತಂಗುದಾಣ ಇಲ್ಲದೆ ತುಂಬಾ ಸಮಸ್ಯೆಯಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.