ಸರಕಾರದ ಅಲ್ಪಸಂಖ್ಯಾತರ ತಾಲೂಕು ಮಾಹಿತಿ ಕೇಂದ್ರ ಕಛೇರಿ ಸ್ಥಳಾಂತರ

ಬೆಳ್ತಂಗಡಿ: ಕರ್ನಾಟಕ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ದ.ಕ,ಇದರ ಅಧೀನದಲ್ಲಿರುವ ಬೆಳ್ತಂಗಡಿ ಕಚೇರಿಯು ಇದುವರೆಗೆ ಇಲ್ಲಿನ ಕೋರ್ಟ್ ರಸ್ತೆಯ ಜಮೀಯತುಲ್ ಫಲಾಹ್ ಕಟ್ಟಡದಲ್ಲಿ ಕಾರ್ಯಾನಿರ್ವಹಿಸುತ್ತಿದ್ದು,‌ಇದೀಗ ಕಚೇರಿಯು ತಾಲೂಕು ಪಂಚಾಯತ ಬಳಿಯ, ಪ್ರಸ್ತುತ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಕಟ್ಟಡ, ಸಿಡಿಪಿಒ ಕಚೇರಿ ರಸ್ತೆ ಇಲ್ಲಿಗೆ ಸ್ಥಳಾಂತರವಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ‌.

ಇಲ್ಲಿ‌ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಂ, ಕ್ರೈಸ್ತ, ಜೈನ, ಬುದ್ಧ, ಪಾರ್ಸಿ ಮೊದಲಾದ ಜನಾಂಗಕ್ಕೆ ಸರಕಾರದಿಂದ ದೊರೆಯುವ ಸೌಲಭ್ಯಗಳ ಮಾಹಿತಿ ಮತ್ತು ಅರ್ಜಿ ಸಲ್ಲಿಕೆಗೆ ಅವಕಾಶವಿದೆ‌. ಹೆಚ್ಚಿನ‌ ಮಾಹಿತಿ ಬೇಕಾದಲ್ಲಿ ದೂರವಾಣಿ ಸಂಖ್ಯೆ -08256-295335 ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.