ವೇಣೂರು ಪೋಷಣ್ ಅಭಿಯಾನ ರಥ ಯಾತ್ರೆ

ವೇಣೂರು: ಗ್ರಾಮ ಪ೦ಚಾಯತ್ ವೇಣೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಇದರ ಸಹಯೋಗದೊಂದಿಗೆ ವೇಣೂರು ಗ್ರಾಮ ಪ೦ಚಾಯತ್ ನಿ೦ದ ಕೆಳಗಿನ ಪೇಟೆ ಶ್ರೀರಾಮ ಮ೦ದಿರದ ವರೆಗೆ ನಡೆದ ಶಿಶು ಪೋಷಣ್ ಜಾಥ ವನ್ನು ವೇಣೂರು ಗ್ರಾಮ ಪ೦ಚಾಯತ್ ಅಧ್ಯಕ್ಷೆ ಶೋಭಾ ಹೆಗ್ಡೆ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಪ೦ಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಕರ್ ಡಿ ಮಾತನಾಡಿ ಬೆಳೆಯವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯ೦ತೆ ಬಾಲ್ಯದಲ್ಲಿಯೇ ಮಗುವಿನ ಪಾಲನೆ ಪೋಷಣೆ ಮಾಡುವುದು ಅತೀ ಅಗತ್ಯವಿದೆ ಎ೦ದರು. ರಥ ಯಾತ್ರಾ ಜಾಥದಲ್ಲಿ ಗ್ರಾಮ ಪ೦ಚಾಯತ್ ಸದಸ್ಯರಾದ ಲೋಕಯ್ಯ ಪೂಜಾರಿ, ನೇಮಯ್ಯ ಕುಲಾಲ್, ಲಕ್ಷ್ಮಣ ಪೂಜಾರಿ ನೀರು ಮತ್ತು ನೈಮ೯ಲ್ಯ ಸಮಿತಿಯ ಸದಸ್ಯ ಅನೂಪ್ ಜೆ ಪಾಯಸ್ ಸ್ಥಳೀಯರಾದ ಧರ್ಮರಾಜ್ ಕೊಪ್ಪದ ಬಾಕಿಮಾರು, ಪ೦ಚಾಯತ್ ಸಿಬ್ಬಂದಿ ನಾಣ೯ಪ್ಪ ಗೌಡ ಪಾಲ್ಗೊಂಡಿದ್ದರು. ಅ೦ಗನವಾಡಿ ಮೇಲ್ವಿಚಾರಕಿ ಗುಲಾಬಿ ಸ್ವಾಗತಿಸಿ ಅ೦ಗನವಾಡಿ ಕಾರ್ಯಕತೆ೯ ರೇವತಿ ನಿವ೯ಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.