ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ ನೇತಾರರಿಂದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯಕ್ರಮ

ಬೆಳ್ತಂಗಡಿ: SSLC ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದ ಶೈವಿ ಗೋಪಾಲ್ ಮತ್ತು ಸುಶ್ಮಿತಾ ರನ್ನು ಇಂದು ತಾಲೂಕಿನ ಮಹಿಳಾ ಕಾಂಗ್ರೆಸ್ ವತಿಯಿಂದ ದ.ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಶಾಲೆಟ್ ಪಿಂಟೋ ರವರ ಘನ ಉಪಸ್ಥಿತಿಯಲ್ಲಿ ಅಭಿನಂಧಿಸಲಾಯಿತು. ವಿಧ್ಯಾರ್ಥಿಗಳ ಭವಿಷ್ಯ ಉಜ್ವಲವನ್ನಾಗಿಸುವ ನಿಟ್ಟಿನಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೇರೇಪಣೆ ನೀಡಲು ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬುತ್ತಿದೆ ಎಂದು ಪಕ್ಷದ ವಾಕ್ತಾರರು ತಿಳಿಸಿದರು.


ಈ ಸಂಧರ್ಭದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಪಧಾಧಿಕಾರಿಗಳಾದ ಶ್ರೀಮತಿ ಸುರೇಖ,ಶ್ರೀಮತಿ ಅಪ್ಪಿ, ವೀಕ್ಷಕರಾಗಿ ಆಗಮಿಸಿದ ಮಂಜುಳ ನಾಯಕ್,ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ಸಿನ ನಗರ ಮತ್ತು ಗ್ರಾಮೀಣ ಸಮಿತಿ ಅಧ್ಯಕ್ಷರಾದ ಶ್ರೀಮತಿ ಉಷಾ ಶರತ್,ಶ್ರೀಮತಿ ಹಾಜಿರ, ತ.ಪ ಸದಸ್ಯೆಯರಾದ ಶ್ರೀಮತಿ ಕೇಶವತಿ, ಶ್ರೀಮತಿ ವಿನುಷಾ, ಶ್ರೀಮತಿ ಸುಜಾತ ಎನ್.ರೈ, ಶ್ರೀಮತಿ ಜಯಶೀಲ, ಜಿಲ್ಲಾ ಕಾಂಗ್ರೆಸ್ ಸದಸ್ಯೆ ಜೆಸಿಂತಾ ಮೋನಿಸ್,ಮಾಜಿ ಗ್ರಾ.ಪ ಅಧ್ಯಕ್ಷೆ ವನಿತಾ,ಮಹಿಳಾ ಕಾಂಗ್ರೆಸ್ ಸದಸ್ಯರಾದ ಶ್ರೀಮತಿ ಶೋಭಾ, ಶ್ರೀಮತಿ ರೇಷ್ಮಾ ಮತ್ತು ವಿದ್ಯಾರ್ಥಿನಿಯರ ಪೋಷಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.