HomePage_Banner_
HomePage_Banner_

ಸುಮಾರು ರೂ.7.82 ಕೋಟಿ ವೆಚ್ಚದ  ಕಾಮಗಾರಿಗಳಿಗೆ ಶಾಸಕ ಹರೀಶ್ ಪೂಂಜ ಶಿಲಾನ್ಯಾಸ

ಬೆಳ್ತಂಗಡಿ: ಹತ್ಯಡ್ಕ, ಶಿಶಿಲ, ಶಿಬಾಜೆ, ರೆಖ್ಯ, ಕಳೆಂಜ, ನಿಡ್ಲೆ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ರಸ್ತೆ ಸೇರಿದಂತೆ ಸುಮಾರು ರೂ. 7.82 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಸೆ.11ರಂದು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ,  ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ತೌಸೀಪ್ ಅಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.
ಶಿಲಾನ್ಯಾಸಗೊಂಡ ಕಾಮಗಾರಿಗಳು-ಹತ್ಯಡ್ಕ, ಶಿಶಿಲ, ಶಿಬಾಜೆ, ರೆಖ್ಯ ಗ್ರಾಮದಲ್ಲಿ ರೂ. 2.62 ಕೋಟಿ ವೆಚ್ಚದಲ್ಲಿ, ಹತ್ಯಡ್ಕ ಗ್ರಾಮದ ಮೈಪಾಳ-ಉಡ್ಯೇರೆ ಕಾಂಕ್ರೀಟ್ ರಸ್ತೆ, ಉಪ್ಪರಡ್ಕ-ಬಡೆಕ್ಕಲ ರಸ್ತೆ, ಮೆದಿನ ರಸ್ತೆ, ಕಲ್ಲಕೋಟೆ-ಪಾಲೆಂಜ ರಸ್ತೆ, ಮುದ್ದಿಗೆ-ಸಂಗಮ ನಗರ ಕಾಲೋನಿ ರಸ್ತೆ, ಶಿಶಿಲ ಗ್ರಾಮದ ಶಿಶಿಲ -ಹೊಳೆಗಂಡಿ ರಸ್ತೆ, ಶಿಶಿಲ ಪೇಟೆ-ಪೇರಿಕೆ ರಸ್ತೆ, ಶಿಶಿಲ ಪೇಟೆ-ಕಾರೆಗುಡ್ಡೆ ರಸ್ತೆ, ಶಿಬಾಜೆ ಗ್ರಾಮದ ಕಾಡುಹಿತ್ತಿಲು-ಮರ್ಯಾಡಿ ರಸ್ತೆ, ಮೊಂಟೆತ್ತಡ್ಕ-ಪಡಂತಾಜೆ ರಸ್ತೆ, ಬಲ್ಲಡ್ಕ-ಬಟ್ಟಾಜೆ-ಪತ್ತಿಮಾರು ರಸ್ತೆ, ರೆಖ್ಯ ಗ್ರಾಮದ ನೇಲ್ಯಡ್ಕ ನಾಳಾಲು ರಸ್ತೆ, ಎಂಜಿರ-ಕೋಟಿಯಾರ್ ರಸ್ತೆ, ಪರಕಲ-ಕೊಳೆಚಾವು ರಸ್ತೆ, ನೇಲ್ಯಡ್ಕ-ಕೊಲ್ಹಾರ ರಸ್ತೆಗಳಿಗೆ ಶಿಲಾನ್ಯಾಸ ನೆಡೆಯಿತು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ಹತ್ಯಡ್ಕ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂಧ್ರ ನಾಯಕ್, ಹತ್ಯಡ್ಕ ಸಹಕಾರಿ ಸಂಘದ ನಿರ್ದೇಶಕ ಕೊರಗಪ್ಪ ಗೌಡ, ಕೊಕ್ಕಡ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯೋಗೀಶ್ ಆಲಂಬಿಲ, ಕಾರ್ಯದರ್ಶಿ ಕರುಣಾಕರ ಶಿಶಿಲ, ಎ.ಪಿ.ಎಮ್.ಸಿ ನಾಮನಿರ್ದೇಶಿತ ಸದಸ್ಯ ಚಂದ್ರಶೇಖರ್ ‍ಗೌಡ,  ಶಿಶಿಲೇಶ್ವರ ದೇವಸ್ಥಾನದ ಮಾಜಿ ಅಧ್ಯಕ್ಷ ಶ್ರೀನಿವಾಸ ಮೂಡೆತ್ತಾಯ, ಶಿಶಿಲ ಗ್ರಾ,ಪಂ ಮಾಜಿ ಸದಸ್ಯ ಸೂರಜ್ ನೆಲಿತ್ತಾಯ,  ಕೆ.ಜಿ. ಗೋಖಲೆ ಶಿಶಿಲ, , ಗ್ರಾಮಸ್ಥರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹತ್ಯಡ್ಕ ಸಹಕಾರಿ ಸಂಘದ ಕೇಂದ್ರ ಕಚೇರಿಯ ಪ್ರಾಂಗಣದಲ್ಲಿ ಇಂಟರ್‍ಲಾಕ್ ಅಳವಡಿಕೆಗೆ ಹಾಗೂ ಶಿಬಾಜೆ ಗ್ರಾಮದ ಭಂಡಿಹೊಳೆಯಲ್ಲಿ ಮೊಬೈಲ್ ಟವರ್‍ಗೆ ಶಾಸಕರು ಶಿಲಾನ್ಯಾಸವನ್ನು ನೆರವೇರಿಸಿದರು.

ಕಳೆಂಜ ಗ್ರಾಮದಲ್ಲಿ ರೂ. 90 ಲಕ್ಷ ವೆಚ್ಚದ ಕಾಮಗಾರಿಗಳಾದ, ಕುಡುಪ್ಪಾರು ಪುತ್ಯೆಬೈಲು ರಸ್ತೆ ಕಾಂಕ್ರಿಟೀಕರಣ, ಪಾಂಗಾಳ ಅಂಗರಂಡ ರಸ್ತೆ ಕಾಂಕ್ರಿಟೀರಣ, ಹಾರಿತ್ತಕಜೆ ರಸ್ತೆ ಕಾಂಕಿಟೀಕರಣ, ಸದಾಶೀವೇಶ್ವರ ದೇವಸ್ಥಾನ ರಸ್ತೆ ಕಾಂಕ್ರಿಟೀಕರಣ, 5 ಸೆಂಟ್ಸ್ ಬಂಡೇರಿ ರಸ್ತೆ ಕಾಂಕ್ರಿಟೀಕರಣ, ಬೀಜಪಲ್ಕೆ ಕೆದಿಂಬೊಟ್ಟು ರಸ್ತೆ ಕಾಂಕ್ರಿಟೀಕರಣ, ಕುಕ್ಕಾಜರ ರಸ್ತೆಯ ಪರಪ್ಪು ಎಂಬಲ್ಲಿ ಸೇತುವೆ ರಚನೆಗೆ ಶಾಸಕರು ಶಿಲಾನ್ಯಾಸ ನೆರವೇರಿಸಿದರು. ನಿಡ್ಲೆ ಗ್ರಾಮದಲ್ಲಿ ರೂ.4.30 ಕೋಟಿ ವೆಚ್ಚದ ಕಾಮಗಾರಿಗಳಾದ ಬಾನೋಟ್ಟು ರಸ್ತೆ ಕಾಂಕ್ರಿಟೀಕರಣ, ಬೂಡುಜಾಲಿನಿಂದ ಸನಿಲದವರೆಗೆ ರಸ್ತೆ ಅಭಿವೃದ್ಧಿ, ಶೇಡಿಯಿಂದ ಪಿಲ್ಕಜೆವರೆಗೆ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ ನೆರವೇರಿಸಿ, ಬರೆಂಗಾಯದಿಂದ ಕಜೆ ರಸ್ತೆ ಕಾಂಕ್ರಿಟೀಕರಣವನ್ನು ಉದ್ಘಾಟಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.