ರಸ್ತೆ ಸೇರಿದಂತೆ ಸುಮಾರು ರೂ.7.82 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಹರೀಶ್ ಪೂಂಜ ಶಿಲಾನ್ಯಾಸ

ಬೆಳ್ತಂಗಡಿ: ಹತ್ಯಡ್ಕ, ಶಿಶಿಲ, ಶಿಬಾಜೆ, ರೆಖ್ಯ, ಕಳೆಂಜ, ನಿಡ್ಲೆ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ರಸ್ತೆ ಸೇರಿದಂತೆ ಸುಮಾರು ರೂ. 7.82 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಸೆ.11ರಂದು ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಶಿಶಿಲ ಗ್ರಾಮದ ಶಿಶಿಲ -ಹೊಳೆಗಂಡಿ ರಸ್ತೆ,(25ಲಕ್ಷ) ಶಿಶಿಲ ಪೇಟೆ-ಪೇರಿಕೆ ರಸ್ತೆ(10ಲಕ್ಷ) ಶಿಶಿಲ ಪೇಟೆ-ಕಾರೆಗುಡ್ಡೆ(10ಲಕ್ಷ) ವೆಚ್ಚದ ಕಾಮಗಾರಿಗಳಿಗೆ ಶಾಸಕ ಹರೀಶ್ ಪೂಂಜ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ಹತ್ಯಡ್ಕ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂಧ್ರ ನಾಯಕ್, ಹತ್ಯಡ್ಕ ಸಹಕಾರಿ ಸಂಘದ ನಿರ್ದೇಶಕ ಕೊರಗಪ್ಪ ಗೌಡ, ಕೊಕ್ಕಡ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯೋಗೀಶ್ ಆಲಂಬಿಲ, ಕಾರ್ಯದರ್ಶಿ ಕರುಣಾಕರ ಶಿಶಿಲ, ಎ.ಪಿ.ಎಮ್.ಸಿ ನಾಮನಿರ್ದೇಶಿತ ಸದಸ್ಯ ಚಂದ್ರಶೇಖರ್ ‍ಗೌಡ,  ಶಿಶಿಲೇಶ್ವರ ದೇವಸ್ಥಾನದ ಮಾಜಿ ಅಧ್ಯಕ್ಷ ಶ್ರೀನಿವಾಸ ಮೂಡೆತ್ತಾಯ, ಶಿಶಿಲ ಗ್ರಾ,ಪಂ ಮಾಜಿ ಸದಸ್ಯ ಸೂರಜ್ ನೆಲಿತ್ತಾಯ,  ಕೆ.ಜಿ. ಗೋಖಲೆ ಶಿಶಿಲ, , ಗ್ರಾಮಸ್ಥರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕರು ಮತ್ಸ ಸಂಕುಲವನ್ನು ವೀಕ್ಷಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.