ತಣ್ಣೀರುಪಂತ ಆಯುಷ್ಮಾನ್ ಕಾರ್ಡ್ ಉಚಿತ ನೋಂದಾವಣಿ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

ತಣ್ಣೀರುಪಂತ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುವಾಯನಕೆರೆ ಯೋಜನಾ ಕಚೇರಿ ವಿಭಾಗದ ‌‌ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಹಾಗೂ ಸೃಜನ ಶೀಲಾ ಕಾರ್ಯಕ್ರಮದ ವತಿಯಿಂದ ಆಯುಷ್ಮಾ ನ್ ಭಾರತ್ ಅರೋಗ್ಯ ಕರ್ನಾಟಕ ಕಾರ್ಡ್ ಉಚಿತ ನೊಂದಾವಣೆ ತಣ್ಣೀರುಪಂತ ಕಲ್ಲಕಟ್ಟನಿ ಸ.ಹಿ.ಪ್ರಾ. ಶಾಲಾ ವಠಾರದಲ್ಲಿ ಸೆ.10 ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಒಕ್ಕೂಟ ಅಧ್ಯಕ್ಷರಾದ ಪ್ರಭಾಕರ್ ಗೌಡ ಪೊಸಂದೋಡಿ ಅಧ್ಯಕ್ಷತೆ ವಹಿಸಿದ್ದರು.ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶ್ರೀಧರ್ ಕರ್ಕೇರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.ಮುಖ್ಯ ಅತಿಥಿಯಾಗಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಹರಿಣಿ ಮಾತನಾಡುತ್ತಾ ಬಡವರಿಗೆ ಮಾತ್ರ ಸೀಮಿತ ವಾಗಿದ್ದ ಅಯುಷ್ಮಾನ್ ಭಾರತ್ ಅರೋಗ್ಯ ವಿಮಾ ಯೋಜನೆಯು ಎಲ್ಲಾ ವರ್ಗದ ಜನರಿಗೆ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಅದರಿಂದ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯಲ್ಲಿರುವ ಪ್ರಗತಿ ಬಂಧು ಸ್ವಸಹಾಯ, ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಸುಮಾರು 5 ಸಾವಿರಕ್ಕೂ ಹೆಚ್ಚು ಸದಸ್ಯರಿಗೆ ಆಯುಷ್ಮ್ ನ್ ಕಾರ್ಡ್ ನೀಡಲು ನಿರ್ಧಾರಿಸಲಾಗಿದೆ ಎಂದು ತಿಳಿಸಿದರು.

ತಣ್ಣೀರುಪಂಥ ಒಕ್ಕೂಟ ದ ಅಧ್ಯಕ್ಷ ಮಧುಕುಮಾರ್ ಒಕ್ಕೂಟದ ಮಾಜಿ ಅಧ್ಯಕ್ಷರಾದ ಲಿಂಗಪ್ಪ, ಭಾರತ್ ಕಂಪ್ಯೂಟರ್ ಸೆಂಟರ್ ಮಾಹಿತಿ ಕೇಂದ್ರ ಸಿಬ್ಬಂದಿ ನೋಣಯ್ಯ,ರೋಹಿನಿ ಸಿ.ಪಕಳ ಹಾಗೂ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ತಣ್ಣೀರುಪಂತ ವಲಯ ಮೇಲ್ವಿಚಾರಕಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ದೇವಪ್ಪ ಸ್ವಾಗತಿಸಿ, ಪ್ರಶಾಂತ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.