ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿಗಳ ಉಚಿತ ಆರೋಗ್ಯ ತಪಾಸಣೆ

ಕರ್ತವ್ಯದ ಒತ್ತಡದ ಮಧ್ಯೆ ಆರೋಗ್ಯ ಸ್ಥಿರತೆ ಕಾಪಾಡುವುದು ಮುಖ್ಯ; ಎಸ್‌ಐ ಸೌಮ್ಯಾ

ಬೆಳ್ತಂಗಡಿ: ಪೊಲೀಸರು ಎಂದ್ರೆ ಸಮಾಜದ ಸರ್ವ ಕ್ಷೇತ್ರದಲ್ಲೂ ಕೆಲಸ‌ಮಾಡುವ ಸಹಜ ಒತ್ತಡದಿಂದಿದ್ದು, ಆರೋಗ್ಯ ಸ್ಥಿರತೆ ಕಾಪಾಡಿಕೊಳ್ಳಲು ಸಮಯಾವಕಾಶದ ಕೊರತೆ ಎದುರಿಸುವವರಾಗಿದ್ದೇವೆ. ಅಂತಹಾ ಸ್ಥಿತಿಯಲ್ಲಿ
ಪೊಲೀಸರ ಆರೋಗ್ಯ ಕಾಳಜಿ ಬಗ್ಗೆ ಸಂಘಟನೆ ಸ್ವ ಆಸಕ್ತಿಯಿಂದ ಜವಾಬ್ಧಾರಿ ವಹಿಸಿರುವುದು ಸ್ಲಾಘನೀಯ ಎಂದು ಪುಂಜಾಲಕಟ್ಟೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೌಮ್ಯಾ ಹೇಳಿದರು.

ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಮಡಂತ್ಯಾರು, ಯುವ ವಕೀಲರ ವೇದಿಕೆ, ಸ್ಪಂದನಾ ಪೊಲಿಕ್ಲಿನಿಕ್ ಬೆಳ್ತಂಗಡಿ, ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಬೆಳ್ತಂಗಡಿ, ಪೊಲೀಸ್ ಇಲಾಖೆ, ವತಿಯಿಂದ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಎಲ್ಲ ಪೊಲೀಸ್ ಸಿಬ್ಬಂದಿಗಳಿಗೆ ಸೆ. 9 ರಂದು ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣೆ, ಉಚಿತ ರಕ್ತ ಪರೀಕ್ಷೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ ಧನಂಜಯ ರಾವ್ ವಹಿಸಿದ್ದರು. ಸಮಾರಂಭದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಪಿ.ಸಿ ಸೆಬಾಸ್ಟಿಯನ್ ಮುಂಡಾಜೆ, ಠಾಣೆಯ ಇನ್ನೋರ್ವ ಸಬ್ ಇನ್ಸ್‌ಪೆಕ್ಟರ್ ಓಡಿಯಪ್ಪ ಗೌಡ, ರೋಟರಿ ಕ್ಲಬ್ ಮಡಂತ್ಯಾರು ಘಟಕದ ಅಧ್ಯಕ್ಷ ಜಯಂತ ಶೆಟ್ಟಿ ಉಪಸ್ಥಿತರಿದ್ದು ಶುಭಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.