HomePage_Banner_
HomePage_Banner_

ಬೆಳ್ತಂಗಡಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ವತಿಯಿಂದ ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ

ಬೆಳ್ತಂಗಡಿ : ಮಹಿಳಾ ಮತ್ತು ಮಕ್ಕಳ ಇಲಾಖೆಯ ವತಿಯಿಂದ ಸೆಪ್ಟೆಂಬರ್ ತಿಂಗಳ ತಾಲೂಕು ಮಟ್ಟದ ಪೋಷಣ್ ಅಭಿಯಾನ ಕಾರ್ಯಕ್ರಮ ಸೆ.೮ ರಂದು ಇಲಾಖೆ ಸಭಾಂಗಣದಲ್ಲಿ ನಡೆಯಿತು.
ತಾ. ಪಂ. ಉಪಾಧ್ಯಕ್ಷೆ ವೇದಾವತಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಪ್ರಕೃತಿಯಲ್ಲಿ ಸಿಗುವ ಗಿಡ ಮೂಲಿಕೆಗಳಲ್ಲಿ ಅಧಿಕವಾದ ಔಷಧೀಯ ಗುಣಗಳು ಇವೆ. ಈಗಿನ ಕಾಲಘಟ್ಟದಲ್ಲಿ ವಿಶ್ವಕ್ಕೆ ಬಂದಿರುವ ಕೊವೀಡ್-೧೯ ನಂತಹ ಮಹಾಮಾರಿಯನ್ನು ನಿಯಂತ್ರಣದಲ್ಲಿಡಲು ಇಂತಹ ಪೋಷಣಾ ಅಭಿಯಾನದಿಂದ ಪ್ರಯೋಜನವಾಗುತ್ತದೆ. ಆದುದರಿಂದ ಸರ್ಕಾರ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪ್ರತಿ ಗ್ರಾಮಗಳಿಗೆ ತಲುಪಿಸುವ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಯಶಸ್ವಿಯಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ.ಎ ಮಾತನಾಡಿ ಮಾನವ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಮಾನವ ಶರೀರದ ಶಕ್ತಿಗಾಗಿ ಸವೆದು ಹೋದ ಜೀವಶಕ್ತಿಗಳ ಪುರ್ನರಚನೆಗಾಗಿ ಮಾಡುವ ಕಾರ್ಯಕ್ರಮವೇ ಪೋಷಣಾ ಅಭಿಯಾನ . ಈ ಅಭಿಯಾನದಲ್ಲಿ ವಿವಿಧ ಸೊಪ್ಪು -ತರಕಾರಿಗಳ ಪೌಷ್ಠಿಕಾಂಶ ಮತ್ತು ವಿಟಮಿನ್ ಸಿಗಳು ಹೇರಳವಾಗಿ ಸಿಗುವುದರಿಂದ ಇದನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ.
ಸಭಾಧ್ಯಕ್ಷತೆ ವಹಿಸಿದ್ದ ತಾ. ಪಂ ಅಧ್ಯಕ್ಷೆ ದಿವ್ಯಜ್ಯೋತಿ ಮಾತನಾಡುತ್ತಾ ಈಗೀನ ಮಕ್ಕಳು ಆರೋಗ್ಯವಂತ ಜೀವನ ಮತ್ತು ವಿದ್ಯಾರ್ಜನೆಗಾಗಿ ಪೌಷ್ಠಿಕ ಆಹಾರದ ಬಳಕೆ ತುಂಬಾ ಉಪಯುಕ್ತವಾಗಿದೆ. ಪ್ರತಿಯೊಂದು ಮನೆಯಲ್ಲಿ ಪೌಷ್ಠಿಕ ಆಹಾರ ಪದಾರ್ಥಗಳನ್ನು ಸೇವಿಸಿದಾಗ ಮಾತ್ರ ಆರೋಗ್ಯವಂತ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.
ಅರಣ್ಯ ಇಲಾಖಾಧಿಕಾರಿ ರವೀಂದ್ರ .ಕೆ, ಸಾರ್ವಜನಿಕ ಶಿಕ್ಷಣ ಇಲಾಖಾಧಿಕಾರಿ ಪುಷ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತಣ್ಣೀರುಪಂತ ಅಂಗನವಾಡಿ ಮೇಲ್ವಿಚಾರಕಿ ನಂದನಾ ಕುಮಾರಿ ಮನೆಯಲ್ಲಿ ಬೆಳೆದ ನೆಲ್ಲಿಕಾಯಿಂದ ತಯಾರಿಸುವ ವಿವಿಧ ಖಾದ್ಯಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಿ, ಅದರಲ್ಲಿರುವ ಔಷಧೀಯ ಗುಣಗಳ ಬಗ್ಗೆ ಮಾಹಿತಿ ನೀಡಿದರು.
ಗುರುವಾಯನಕೆರೆ ವಯಲ ಮೇಲ್ವಿಚಾರಕಿ ಯಶೋಧ ಹಾಗೂ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದು, ಸಹಕರಿಸಿದರು.
ಬೆಳ್ತಂಗಡಿ ಅಂಗನವಾಡಿ ಕಾರ್ಯಕರ್ತೆ ಅರುಣ ಪ್ರಾರ್ಥನೆ ಮಾಡಿದರು. ನೆರಿಯ ವಲಯ ಮೇಲ್ವಿಚಾರಕಿ ಅನ್ನಪೂರ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಳ್ತಂಗಡಿ ಹಿರಿಯ ಮೇಲ್ವಿಚಾರಕಿ ಸುಲೋಚನಾ ಕೆ.ಆರ್ ಸ್ವಾಗತಿಸಿದರು. ಹಿರಿಯ ಮೇಲ್ವಿಚಾರಕಿ ರತ್ನಾವತಿ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.