ಬೆಳ್ತಂಗಡಿ ಹೊಲಿ ರೆಡೀಮರ್ ಚರ್ಚ್ ನಲ್ಲಿ ಮೊಂತಿ ಹಬ್ಬ ಆಚರಣೆ

ಬೆಳ್ತಂಗಡಿ : ಹೊಲಿ ರೆಡೀಮರ್ ಚರ್ಚ್ ನಲ್ಲಿ ಕೊರೋನಾ ಕೋವಿಡ್ 19 ಸರಕಾರಿ ಕಾನೂನು ಪ್ರಕಾರ ಸರಳ ವಾಗಿ ಕನ್ಯಾ ಮರಿಯಮ್ಮ ಜನ್ಮ ದಿನ ವನ್ನು ಸೆ. 8ರಂದು ಆಚರಿಸಲಾಯಿತು. ದಿವ್ಯ ಬಲಿ ಪೂಜೆ ಯನ್ನು ವಂ. ಫಾ. ಜೋಸೆಫ್ ಅಲ್ಫೋನ್ಸ್ ಕಾರ್ಡೋಜ ಅರ್ಪಿಸಿದರು. ಹೊಲಿ ರೆಡೀಮರ್ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲ ವಂ. ಜೈಸನ್ ಮೋನಿಸ್ ಸಹಕರಿಸಿದರು. ನಂತರ ಹೊಸ ಬೆಳೆ ಯಾದ ಭತ್ತದ ತೆನೆಯನ್ನು ಆಶೀರ್ವದಿಸಿ ವಿತರಿಸಲಾಯಿತು. ಇದೆ ಸಂದರ್ಭದಲ್ಲಿ ವಾಹನಗಳ ಆಶೀರ್ವಚನ ನೆರವೇರಿಸಲಾಯಿತು. ಈ ಸಂದರ್ಭ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರು, ಕಾರ್ಯದರ್ಶಿ, ಸಮಿತಿ ಸದಸ್ಯರು, ಗುರಿಕಾರರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.