HomePage_Banner_
HomePage_Banner_

ಉಜಿರೆ ಮುಂಡತ್ತೋಡಿ ಪ.ಜಾತಿ ಕಾಲೋನಿಯಲ್ಲಿ ಮ.ಗಾ.ರಾ.ಗ್ರಾ.ಉ.ಖಾ ಯೋಜನೆಯ ‘ಬಚ್ಚಲು ಗುಂಡಿ’ ಅಭಿಯಾನಕ್ಕೆ ಚಾಲನೆ

ಉಜಿರೆ: ಸ್ವಚ್ಛತೆ ಹಾಗೂ ಅಂತರ್ಜಲ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸರಕಾರ, ಮಹತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮೂಲಕ ‘ಬಚ್ಚಲು ಗುಂಡಿ’ (ಸೋಕ್ ಪಿಟ್) ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಕುಸುಮಧರ.ಬಿ ಅವರು ಕರೆ ನೀಡಿದರು. ಅವರು ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡತ್ತೋಡಿ ನಾಣಿಲ್ದಡಿ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ‘ಬಚ್ಚಲು ಗುಂಡಿ’ (ಸೋಕ್ ಪಿಟ್) ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಉಜಿರೆ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಪಿ.ಹೆಚ್.ಪ್ರಕಾಶ್ ಶೆಟ್ಟಿ, ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮೂಲಕ ಸರ್ಕಾರ ಹೊಸ-ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ.  ಅದರಂತೆ ಈ ಸೆಪ್ಟೆಂಬರ್ ತಿಂಗಳಿನಲ್ಲಿ ತ್ಯಾಜ್ಯ ದ್ರವ ಗುಂಡಿ ಅಂದರೆ ಸ್ನಾನ ಮಾಡಿದ ನೀರು, ಬಟ್ಟೆ ಒಗೆದ ಹಾಗೂ ಕೈ ತೊಳೆಯುವ ನೀರನ್ನು ಪೈಪ್ ಮೂಲಕ ಒಂದೇ ಗುಂಡಿಗೆ ಬಿಡುವಂತಹ ‘ಬಚ್ಚಲು ಗುಂಡಿ’ ಅಥವಾ ‘ಸೋಕ್ ಪಿಟ್’ ಎಂಬ ಹೊಸ ಕಾಮಗಾರಿಯನ್ನು ಅನುಷ್ಠಾನಗೊಳಿಸಿದೆ. ಇದನ್ನು ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರು ಸದುಪಯೋಗಪಡಿಸಿಕೊಳ್ಳಬೇಕು.

ಇದಕ್ಕಾಗಿ ಗ್ರಾಮ ಪಂಚಾಯತ್ ನಿಂದಾಗುವ ಎಲ್ಲಾ ಸೌಲಭ್ಯಗಳನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಆಡಳಿತಾಧಿಕಾರಿ ಡಾ.ಯತೀಶ್ ಕುಮಾರ್ ಎಂ.ಎಸ್, ಗ್ರಾ.ಪಂ. ಕಾರ್ಯದರ್ಶಿ ಜಯಂತ್.ಬಿ, ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಐಇಸಿ ತಾಲೂಕು ಸಂಯೋಜಕರಾದ ಸುನೀತಾ, ಮ.ಗಾ.ರಾ.ಗ್ರಾ.ಉ.ಖಾತರಿ ಯೋಜನೆಯ ತಾಂತ್ರಿಕ ಸಹಾಯಕರಾದ ರೇಷ್ಮಾ, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಸ್ಥಳೀಯರು ಹಾಜರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.