HomePage_Banner_
HomePage_Banner_

ರಕ್ತೇಶ್ವರಿಪದವು : ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಚೈತ್ರ ಪ್ರಭಾ ರವರಿಗೆ ಸನ್ಮಾನ

ನ್ಯಾಯತರ್ಫು : ಇಲ್ಲಿಯ ರಕ್ತೇಶ್ವರಿಪದವು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಚೈತ್ರ ಪ್ರಭಾ ಶ್ರೀ ಶ್ಯಾಂ ಅವರಿಗೆ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು, ಸದಸ್ಯರು ಮತ್ತು ಮಕ್ಕಳ ಪೋಷಕರ ವತಿಯಿಂದ ಸೆ.7 ರಂದು ಶಾಲಾ ಸಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.

ಶಿಕ್ಷಕಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾನಮ್ಮಊರಿನ ಶಾಲಾ ಶಿಕ್ಷಣ ಗುಣಮಟ್ಟ, ಚಟುವಟಿಕೆ,ಮೇಲುಸ್ತುವಾರಿ ಸಮಿತಿ ಮತ್ತು ಗ್ರಾಮದ ಶಿಕ್ಷಣ ಪ್ರೇಮಿಗಳ ಸಹಾಯದಿಂದ ಕಳೆದ ವರ್ಷದಲ್ಲಿ ತಾಲೂಕಿನ ಅತ್ಯುತ್ತಮ ಪ್ರಶಸ್ತಿ ಹಾಗೂ ಈ ವರ್ಷದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ದೊರೆಯಲು ಸಾಧ್ಯವಾಯಿತು. ನಾನು ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಪ್ರಶಸ್ತಿ ಲಭಿಸಿದೆ ತುಂಬಾ ಸಂತೋಷವಾಗಿದೆ.ಜೊತೆಯಲ್ಲಿ ನನ್ನ ಜವಾಬ್ದಾರಿ ಜಾಸ್ತಿಯಾಗಿದೆ.ಮುಂದೆಯೂ ಶಾಲೆಗೆ ನಿಮ್ಮಿಂದ ಸಂಪೂರ್ಣ ಸಹಕಾರ ಬೇಕು ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ಗೌಡ ಕಲಾಯಿತೋಟ್ಟು ಸಭಾ ಅಧ್ಯಕ್ಷತೆ ವಹಿಸಿ,ಕಳೆದ 2 ವರ್ಷಗಳಲ್ಲಿ ನಮ್ಮ ಶಾಲೆಗೆ ತಾಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ಮುಂದಿನ ವರ್ಷಗಳಲ್ಲಿ ರಾಜ್ಯ,ರಾ‌ಷ್ಟ ಮಟ್ಟದ ಪ್ರಶಸ್ತಿಗಳು ದೊರೆಯಲಿ ಎಂದು ಹೇಳಿ ಶುಭ ಹಾರೈಸಿದರು.

ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷೆ ಲಲಿತಾ,ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ನಾಗವೇಣಿ ಕೆ.ಎಸ್,ಕಳಿಯ ಪಂಚಾಯತು ಸದಸ್ಯೆ ಮೋಹಿನಿ ಬಿ ಗೌಡ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.ಶಾಲಾ ಸ್ಥಾಪಕ ಸದಸ್ಯ ಜನಾರ್ದನ ಪೂಜಾರಿ ವಂಜಾರೆ ಸಾರ್ವಜನಿಕರ ಪರವಾಗಿ ಅನಿಸಿಕೆ ವ್ಯಕ್ತಪಡಿಸಿ ಶುಭ ಹಾರೈಸಿದರು.ಮಕ್ಕಳ ಪೋಷಕರು ಸಮಿತಿ ಸದಸ್ಯರು ಮತ್ತು ಬಿಸಿಯೂಟ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.ಸಹ ಶಿಕ್ಷಕಿ ಲಾವಣ್ಯ ಕೆ.ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು. ರೂಪ ನಾಗರಾಜ್ ಗೌಡ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.