HomePage_Banner_
HomePage_Banner_

ಸೌತ್ ಕೆನರಾ ಫೋಟೊಗ್ರಾಪರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ 18ನೇ ವಾರ್ಷಿಕ ಮಹಾಸಭೆ

ಸೌತ್ ಕೆನರಾ ಫೋಟೊಗ್ರಾಪರ್ಸ್ ಅಸೋಸಿಯೇಷನ್ ದಕ ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ 18ನೇ ವಾರ್ಷಿಕ ಮಹಾಸಭೆ ಸೆ5 ರಂದು ಗುರುವಾಯನಕೆರೆ ಅಯ್ಯಪ್ಪ ಗುಡಿ ಬಳಿ ಛಾಯಭವನದಲ್ಲಿ ವಲಯದ ಅಧ್ಯಕ್ಷ ಸುರೇಶ್ ಬಿ ಕೌಡಂಗೆ ಅವರ ಅಧ್ಯಕ್ಷತೆಯಲ್ಲಿ ಜರಗಿತು. ದ ಕ ಉಡುಪಿ ಜಿಲ್ಲಾ ಫೋಟೋಗ್ರಾಫರ್ಸ್ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಛಾಯಾಗ್ರಾಹಣ ವ್ರತ್ತಿ ಉಳಿದರೆ ಸಂಘಟನೆ ಬೆಳೆಯಬಹುದು ನಮ್ಮ ಸದಸ್ಯರ ಕಷ್ಟಗಳನ್ನು ಅರಿತು ಅವರೀಗೆ ಸ್ಪಂದನೆ ನೀಡುವುದು ನಮ್ಮಲ್ಲೆರ ಕರ್ತವ್ಯ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೋಶಾಧಿಕಾರಿ ಆನಂದ ಎನ್ ಬಂಟ್ವಾಳ, ಜಿಲ್ಲಾ ಎಸ್ ಕೆ ಪಿ ವಿವಿದೋಧ್ಧೇಶ ಸಹಕಾರಿ ಸಂಘದ ನಿರ್ದೇಶಕ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್ , ಆಗಮಿಸಿದ್ದರು. ವೇದಿಕೆಯಲ್ಲಿ ವಲಯದ ಗೌರವಾಧ್ಯಕ್ಷ ಎನ್ ಎ ಗೋಪಾಲ್ ಅಳದಂಗಡಿ, ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ ಸುವರ್ಣ, ಪ್ರಧಾನ ಕಾರ್ಯದರ್ಶಿ ಗಂಗಾಧರ ಉಜಿರೆ, ಕೋಶಾಧಿಕಾರಿ ಪ್ರಭಾಕರ ಕಕ್ಕಿಂಜೆ , ಉಪಾಧ್ಯಕ್ಷ ಮಹಾವೀರ ಜೈನ್, ಗಣೇಶ್ ವೇಣೂರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ SSLC 2020 ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಲಯದ ಸದಸ್ಯರ ಮಕ್ಕಳಿಗೆ ಗೌರವಾರ್ಪಣೆ ಮಾಡಲಾಯಿತು. ಸರಕಾರದ ಕೊವಿಡ್ 19 ನಿಗದಿಪಡಿಸಿದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಮಹಾಸಭೆ ನಡೆಸಲಾಯಿತು. ಗಣೇಶ್ ನಾರಾವಿ ಪ್ರಾರ್ಥನೆ ಗೈದರು. ಕೆ ವಸಂತ್ ಶರ್ಮ ಉಜಿರೆ ಕಾರ್ಯಕ್ರಮ ನಿರೂಪಿಸಿ ಅಧ್ಯಕ್ಷ ಸುರೇಶ್ ಬಿ ಕೌಡಂಗೆ ಸ್ವಾಗತಿಸಿ ದಾಮೋದರ್ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.