ಉಬರಡ್ಕ ಉಮೇಶ್ ಶೆಟ್ಟಿ ನಿಡ್ಲೆ ಹಾಗೂ ಅರಸಿನಮಕ್ಕಿ ಡಾ.ಚಂದ್ರಶೇಖರ್ ದಾಮ್ಲೆ ಸುಳ್ಯ ಇವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ

ಬೆಳ್ತಂಗಡಿ: 1971 ರಿಂದ 2015 ರವರೆಗೆ ಧರ್ಮಸ್ಥಳ ಮೇಳದಲ್ಲಿ 43 ವರ್ಷಗಳ ಕಾಲ ಸೇವೆ ನೀಡಿ ನಿವೃತ್ತಿ ಹೊಂದಿದ ಉಬರಡ್ಕ ಉಮೇಶ್ ಶೆಟ್ಟಿ ನಿಡ್ಲೆ ಇವರು ಯಕ್ಷಗಾನ ಅಕಾಡೆಮಿಯಿಂದ ಯಕ್ಷ ಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಧರ್ಮಸ್ಥಳದಲ್ಲಿ 1971 ರಲ್ಲಿ ಪ್ರಾರಂಭಗೊಂಡ ಯಕ್ಷಗಾನ ಲಲಿತಾಕಲಾ ಕೇಂದ್ರದಲ್ಲಿ ಪ್ರಥಮ ಬ್ಯಾಚ್ ನ ವಿದ್ಯಾರ್ಥಿಯಾಗಿ ಸೇರ್ಪಡೆಗೊಂಡು ಯಕ್ಷಗಾನದ ಎಲ್ಲಾ ನಾಟ್ಯಗಳನ್ನು ಕಲಿತು ಧರ್ಮಸ್ಥಳ ಮೇಳವೊಂದರಲ್ಲಿಯೇ ಸುಮಾರು ‌43 ವರ್ಷಗಳ ಕಾಲ ಕಿರೀಟ ವೇಷ, ನಾಟಕೀಯ ವೇಷ, ಪುಂಡು ವೇಷ ಗಳಲ್ಲಿ ತನ್ನ ಪ್ರೌಡಿಮೆಯನ್ನು ತೋರಿ ನಂತರ ನಿವೃತ್ತರಾದರು. ಇದೀಗ 5 ವರ್ಷಗಳಿಂದ ವಿವಿಧ ಕಡೆ ಯಕ್ಷಗಾನ ತರಬೇತಿ ನೀಡುತ್ತಿದ್ದಾರೆ. ಇವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ 2019 ನೇ ಸಾಲಿನ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಘೋಷಣೆಯಾಗಿದೆ.

ಅದೇ ರೀತಿ ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಅಮೋಘ ಕೊಡುಗೆಗಾಗಿ ಸುಳ್ಯದ ತೆಂಕು ತಿಟ್ಟು ಹಿತರಕ್ಷಣಾ ವೇದಿಕೆಯ ಸಂಚಾಲಕ ಸ್ನೇಹ ಶಾಲೆಯ ಅಧ್ಯಕ್ಷ ಹಾಗೂ ಯಕ್ಷಗಾನ ವಿದ್ವಾಂಸ ಅರಸಿನಮಕ್ಕಿ ಡಾ. ಚಂದ್ರಶೇಖರ ದಾಮ್ಲೆ ಸುಳ್ಯ ಇವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ 2019 ನೇ ಸಾಲಿನ ಗೌರವ ಪ್ರಶಸ್ತಿಗೆ ಘೋಷಣೆಯಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.