ಸಾಲಗಾರರಿಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್

ಬೆಳ್ತಂಗಡಿ : ಸಾಲ ಮರುಪಾವತಿ ಮುಂದೂಡಿಕೆ ಮಾಡಿ ಸಾಲಗಾರರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಈ ವರ್ಷದ ಆ.31 ರವರೆಗೆ ವಸೂಲಾಗದ ಸಾಲ ಎಂದು ಘೋಷಿಸಿಲ್ಲದ ಸಾಲ ಖಾತೆಗಳನ್ನು ಮುಂದಿನ ಆದೇಶದವರೆಗೆ ಎನ್ ಪಿಎ ಆಗಿ ಘೋಷಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಕೊರೂನಾ ಸಂಕಷ್ಟದ ಈ ಸಮಯ ಸಾಲಗಾರರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಕೊರೊನಾ ವೈರಸ್ ನಿಂದಾಗಿ ಆರ್ಥಿಕ ಸಂಕಷ್ಟದ ಕಾರಣಕ್ಕೆ ಸಾಲ ಮರುಪಾವತಿಯನ್ನು 6 ತಿಂಗಳ‌ ಕಾಲ ಮುಂದೂಡಲಾಗಿತ್ತು. ಈ ಮೂಲಕ ವಾಹನ, ಗೃಹ ಸೇರಿದಂತೆ ಮೊದಲಾದ ಸಾಲಗಳನ್ನು ಪಡೆದು ಇಎಂಐ ಪಾವತಿಸಲಾಗದ ಸಾಲಗಾರರಿಗೆ ಕೊಂಚ ರಿಲೀಫ್ ಸಿಕ್ಕಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.