HomePage_Banner_
HomePage_Banner_

ತೋಟತ್ತಾಡಿ: ಅರಣ್ಯ ಇಲಾಖೆಯಿಂದ ಬೋನು ಅಳವಡಿಕೆ

ತೋಟತ್ತಾಡಿ: ಚಾರ್ಮಾಡಿ ಗ್ರಾ.ಪಂ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಬೆಂದ್ರಾಳ ಸಮೀಪ ಬೈಲಂಗಡಿ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ಚೆರತೆ ಹಿಡಿಯಲು ಬೋನನ್ನು ಸೆ.3 ರಂದು ಅಳವಡಿಸಲಾಯಿತು.

ಕಳೆದ ಹಲವು ದಿನಗಳಿಂದ ಈ ಪರಿಸರದಲ್ಲಿ ಚಿರತೆಯು ರಾತ್ರಿ ಸಮಯದಲ್ಲಿ ಓಡಾಟ ನಡೆಸುತ್ತಿದ್ದು, ಸ್ಥಳೀಯರು ನಾಯಿ, ಕೋಳಿ ಹಾಗೂ ಹಟ್ಟಿಯಿಂದ ಜಾನುವಾರುಗಳನ್ನು ಹಿಡಿದುಕೊಳ್ಳುತ್ತಿತ್ತು. ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ಯ ಅವರ ಮಾರ್ಗದರ್ಶನದಂತೆ ಉಪವಲಯ ಅರಣ್ಯಾಧಿಕಾರಿ ಭವಾನಿ ಶಂಕರ್, ಅರಣ್ಯ ರಕ್ಷಕ ಪಾಂಡುರಂಗ ಅವರು ಹಾಗೂ ಸ್ಥಳಿಯ ನಾಗರಿಕರ ಸಹಕಾರದಲ್ಲಿ ಬೋನು ಅಳವಡಿಸಲಾಗಿದೆ. ಸ್ಥಳಿಯ ಬೈಲಂಗಡಿ ಧರ್ಣಪ್ಪ ಗೌಡ ಎಂಬವರ ಒಂದು ವರ್ಷ ಪ್ರಾಯದ ಕರು ಚಿರತೆ ದಾಳಿಗೆ ಬಲಿಯಾಗಿತ್ತು. ಈ ಬಗ್ಗೆ ಗೌಡರು ಅರಣ್ಯ ಇಲಾಖೆ ದೂರು ನೀಡಿದ್ದರು. ಅರಣ್ಯ ಇಲಾಖೆ ತನಿಖೆ ನಡೆಸಿ ಚಿರತೆ ಹಿಡಿಯುವ ಬಗ್ಗೆ ಹೇಳಿ ಧೈರ್ಯ ತಿಳಿಸಿದ್ದರು. ಅಲ್ಲದೆ ಕರುವಿಗೆ ಅರಣ್ಯ ಇಲಾಖೆ ವತಿಯಿಂದ ಪರಿಹಾರ ಕೊಡಿಸಬೇಕು ಎಂದಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.