ವೇಣೂರು ಯುವ ವಾಹಿನಿ ಘಟಕದ ವತಿಯಿಂದ ಗುರು ಸಂದೇಶ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

ವೇಣೂರು ‌: ಯುವವಾಹಿನಿ (ರಿ) ವೇಣೂರು ಘಟಕದ ವತಿಯಿಂದ ವೇಣೂರು ಬಿಲ್ಲವ ಸಂಘದ ಕಚೇರಿಯಲ್ಲಿ ಗುರುಸಂದೇಶ ಕಾರ್ಯಕ್ರಮ ಘಟಕದ ಅಧ್ಯಕ್ಷ ನವೀನ್ ಪೂಜಾರಿ ಪಚ್ಚೇರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಉಜಿರೆ ಅನುಗ್ರಹ ಕಾಲೇಜಿನ ಉಪನ್ಯಾಸಕ ಅರುಣ್ ಕೋಟಿಯನ್ ಇವರು ಗುರು ಸಂದೇಶ ನೀಡಿದರು.

ಮೊದಲಿಗೆ ಇತ್ತೀಚಿಗೆ ನಿಧನರಾದ ನಿವೃತ್ತ ಅಧ್ಯಾಪಕರಾದ ನಮ್ಮ ಘಟಕದ ಹಿತೈಷಿ ಹಾಗೂ ಮಾರ್ಗದರ್ಶನರಾದ ಈಶ್ವರ ಪೂಜಾರಿ ಮೂಡುಕೊಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಸೇವಾ ಯೋಜನೆ ಆಸರೆಯ 18ನೇ ಕಂತನ್ನು ರಕ್ತದ ಸಮಸ್ಯೆಯಿಂದ ಬಳಲುತ್ತಿರುವ ಬಜಿರೆ ಗ್ರಾಮದ ದಿಕ್ಷಿತಾಳಿಗೆ ನೀಡಲಾಯಿತು. ಗುಂಡೂರಿ ಗ್ರಾಮದ ಅಶಕ್ತರಾದ ರತ್ನ ಅವರ ಮನೆಯನ್ನು ಘಟಕದ ವತಿಯಿಂದ ನವೀಕರಿಸಿ ಕೊಡಲು ತೀರ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಭಾರತೀಯ ಅಂಚೆ ಇಲಾಖೆಯಲ್ಲಿ ಪದನೋತ್ತಿಯಾಗಿರುವ ನಮ್ಮ ಘಟಕದ ಸ್ಥಾಪಕ ಕೋಶಾಧಿಕಾರಿ ಉಮೇಶ್ಚಂದ್ರ ಅಂಬಲ ಇವರಿಗೆ ಘಟಕದ ಅಧ್ಯಕ್ಷರು ಅಭಿನಂದಿಸಿದರು

ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ರಮೇಶ್ ಪೂಜಾರಿ ಪಡ್ಡಾಯಿಮಜಲು ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಸದಸ್ಯರಾದ ಹರೀಶ್ ಪಿ.ಎಸ್‌, ಹರೀಶ್ ಪೊಕ್ಕಿ, ರಾಜೇಶ್ ಕೈತೆರಿ ಹಾಗೂ ಗ್ರಾಮ ಸಮಿತಿ ಅಧ್ಯಕ್ಷರು ಮತ್ತು ವೇಣೂರು ಘಟಕದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ಶಿವಪ್ರಕಾಶ್ ಸ್ವಾಗತಿಸಿ, ನ್ಯಾಯವಾದಿ ಸತೀಶ್ ಪೂಜಾರಿ ಯನ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.