HomePage_Banner_
HomePage_Banner_

ಮುಂಡಾಜೆ: ಸಾಕು ನಾಯಿಗಳಿಗೆ ರೇಬಿಸ್ ಲಸಿಕೆ

ಮುಂಡಾಜೆ,ಸೆ.3 :ಬೆಳ್ತಂಗಡಿ ರೋಟರಿ ಕ್ಲಬ್ ನ ಅಂಗಸಂಸ್ಥೆಯಾದ ಮುಂಡಾಜೆ ರೋಟರಿ ಸಮುದಾಯ ದಳ, ಬೆಳ್ತಂಗಡಿ ಪಶುಸಂಗೋಪನಾ ಇಲಾಖೆ, ಮುಂಡಾಜೆ ಗ್ರಾಮ ಪಂಚಾಯತ್, ಮುಂಡಾಜೆ ಪ್ಯಾಕ್ಸ್, ಮುಂಡಾಜೆ ಹಾಲು ಉತ್ಪಾದಕರ ಸಂಘ,ಮುಂಡಾಜೆ ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್, ಮುಂಡಾಜೆ ಯುವಕ ಮಂಡಲ ಇವುಗಳ ಆಶ್ರಯದಲ್ಲಿ ಸಾಕುನಾಯಿಗಳಿಗೆ ರೇಬಿಸ್ ಲಸಿಕೆ ನೀಡುವ ಕಾರ್ಯಕ್ರಮ ಮುಂಡಾಜೆ ಗ್ರಾಮದ ವಿವಿಧ ಸ್ಥಳಗಳಲ್ಲಿ ಗುರುವಾರ ಜರಗಿತು.

ಮುಂಡಾಜೆ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ಹಿರಿಯ ಪಶುವೈದ್ಯಕೀಯ ಪರೀಕ್ಷಕ ನಾಗಶಯನ ರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮಾ ಎ.ಎಸ್. ಪಶುಸಂಗೋಪನಾ ಇಲಾಖೆಯ ಹಿರಿಯ ಪಶುವೈದ್ಯಕೀಯ ಪರೀಕ್ಷಕರಾದ ಪ್ರಶಾಂತ್ ಕುಮಾರ್, ರಾಜಾವರ್ಮಾ ಜೈ ನ್, ಗಂಗಾಧರಸ್ವಾಮಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್, ಕಾರ್ಯದರ್ಶಿ ಅಶೋಕ್ ಕುಮಾರ್, ಮುಂಡಾಜೆ ಪ್ಯಾಕ್ಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ, ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಅಶ್ರಫ್ ಆಲಿ ಕುಂಞ, ಸಂಚಾಲಕ ನಾಮದೇವ ರಾವ್, ಯುವಕ ಮಂಡಲದ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ರೋಟರಿ ಜಿಲ್ಲಾ ಪ್ರತಿನಿಧಿ ಗೋಪಾಲಕೃಷ್ಣ ಜೋಶಿ, ಬಾಬು ಪೂಜಾರಿ,ಸೆಬಾಸ್ಟಿಯನ್ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.


ಆರ್ ಸಿ ಸಿ ಅಧ್ಯಕ್ಷೆ ಅಶ್ವಿನಿ ಎ. ಹೆಬ್ಬಾರ್ ಸ್ವಾಗತಿಸಿದರು. ಶಶಾಂಕ ಮರಾಠೆ ನಿರೂಪಿಸಿದರು. ವಿಘ್ನೇಶ್ ಪ್ರಭು ವಂದಿಸಿದರು.ಮುಂಡಾಜೆ ಗ್ರಾಮ ವ್ಯಾಪ್ತಿಯಲ್ಲಿ ಒಟ್ಟು 122 ಸಾಕು ನಾಯಿಗಳಿಗೆ ರೇಬಿಸ್ ಲಸಿಕೆ ನೀಡಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.