HomePage_Banner_
HomePage_Banner_

ಬೆಂಗಳೂರಿನಲ್ಲಿ 40 ಲಕ್ಷ ರೂ. ಮೌಲ್ಯದ ವಜ್ರದ ಹರಳು ಮಾರಾಟಕ್ಕೆ ಯತ್ನ |ಬೆಳ್ತಂಗಡಿ ಆರಂಬೋಡಿ ನಿವಾಸಿ ಸಹಿತ ಮೂವರ ಬಂಧನ

ಬೆಳ್ತಂಗಡಿ/ಬೆಂಗಳೂರು: ಚಿನ್ನಾಭರಣ ತಯಾರಿಸುವ ಅಂಗಡಿಗೆ ಲಕ್ಷಾಂತರ ರೂ. ಮೌಲ್ಯದ ಅಪರೂಪದ ವಜ್ರದ ಹರಳುಗಳ ಮಾರಾಟಕ್ಕೆ ಹೊಂಚು ಹಾಕುತ್ತಿದ್ದ ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ರಾಮಚಂದ್ರರವರ ಪುತ್ರ ಪ್ರವೀಣ್ ಕುಮಾರ್ ಮತ್ತು ಬಲ್ನಾಡು ನಿವಾಸಿಗಳಿಬ್ಬರ ಸಹಿತ ಮೂವರನ್ನು ಬೆಂಗಳೂರು ಸಿಟಿ ಮಾರುಕಟ್ಟೆ ಪೊಲೀಸರು ಬೆಂಗಳೂರು ಸಿಟಿ ಮಾರುಕಟ್ಟೆಯ ಬಳಿ ಸೆ.1ರಂದು ರಾತ್ರಿ ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ರಾಮಚಂದ್ರರವರ ಪುತ್ರ ಪ್ರವೀಣ್ ಕುಮಾರ್ (51ವ.) ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ರಾಮಚಂದ್ರರವರ ಪುತ್ರ ರವಿ ಕುಮಾರ್(54ವ), ಬೆಳಂದೂರು ಗ್ರಾಮದ ಅಣ್ಣಿ ಪೂಜಾರಿಯವರ ಪುತ್ರ ಸುಧೀರ್(28ವ) ಹಾಗೂಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 9 ಅಪರೂಪದ ವಜ್ರದ ಹರಳುಗಳನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ಸೆ.೧ರಂದು ರಾತ್ರಿ ಸಿಟಿ ಮಾರುಕಟ್ಟೆಯ ಅಂಚೆ ಪೇಟೆ ಬಳಿ ಆಭರಣ ತಯಾರಿಸುವ ಅಂಗಡಿಗಳಿಗೆ ವಜ್ರಗಳನ್ನು ಮಾರಾಟ ಮಾಡಲು ಬಂದ ಆರೋಪಿಗಳನ್ನು ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಮತ್ತವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳು ಕೆಂಪು ಬಣ್ಣದ ಮಹಿಳಾ ಪರ್ಸ್‌ನಲ್ಲ್ಲಿ ನೀಲಿ ಬಣ್ಣದ ಪೇಪರ್‌ನಲ್ಲಿ ವಜ್ರಗಳನ್ನು ಸುತ್ತಿಟ್ಟುಕೊಂಡಿದ್ದರು. ಅವುಗಳ ನಿಖರ ಮೌಲ್ಯ ಗೊತ್ತಾಗಿರಲಿಲ್ಲ. ಕೂಡಲೇ ಆಭರಣ ತಯಾರಿಕಾ ತಜ್ಙರನ್ನು ಕರೆಸಿ ಪರಿಶೀಲನೆ ನಡೆಸಿ ವಜ್ರದ ಹರಳುಗಳು ನೈಜವಾಗಿದ್ದು ರೂ. 40ಲಕ್ಷ ಬೆಲೆ ಬಾಳಲಿವೆ ಎಂದು ತಿಳಿಸಿದ್ದಾರೆ. ವಜ್ರದ ಹರಳುಗಳಿಗೆ ಸೂಕ್ತ ದಾಖಲೆಗಳಿಲ್ಲದಿರುವುದು,ವಾರಸುದಾರರು ಪತ್ತೆಯಾಗದಿರುವುದರಿಂದ ಎಲ್ಲವನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಡಿಸಿಪಿ ಡಾ. ಸಂಜೀವ ಪಾಟೀಲ್ ತಿಳಿಸಿದ್ದಾರೆ.

ಕೃತ್ಯಕ್ಕೆ ಬಳಸಿಕೊಂಡ ಸಂಬಂಧಿಕರ ಕಾರು: ವಜ್ರ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿ ಕೃತ್ಯಕ್ಕೆ ತನ್ನ ಸಂಬಂಧಿಕರೊಬ್ಬರ ಕಾರನ್ನು ಬಳಸಿಕೊಂಡಿದ್ದು. ಕಳೆದ ಎರಡು ದಿನಗಳಿಂದ ಕಾರು ಮತ್ತು ಸಂಬಂಧಿಕ ನಾಪತ್ತೆಯಾಗಿರುವ ಕುರಿತು ಮನೆ ಮಂದಿ ಆತಂಕ ವ್ಯಕ್ತಪಡಿಸಿದ್ದರು. ಇದೀಗ ವಜ್ರ ಸಾಗಾಟ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿತರಾಗಿದ್ದಾರೆ.

ಫೈಲ್ ಆದ ಡೀಲ್: ವಜ್ರ ಮಾರಾಟ ಮಾಡಲು ಬೆಂಗಳೂರಿಗೆ ತೆರಳಿದ ಮೂವರು ಆರೋಪಿಗಳು ವಜ್ರ ಡೀಲ್ ಮಾಡುವ ಸಂದರ್ಭ ಹಣದ ವ್ಯತ್ಯಾಸಕ್ಕೆ ಸಂಬಂಧಿಸಿ ಡೀಲ್ ಪೈಲ್ ಆಗಿತ್ತು. ಹಾಗೆ ವಾಪಸಾಗುತ್ತಿದ್ದ ವೇಳೆ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.