HomePage_Banner_
HomePage_Banner_

ಕಾಳಜಿ ರಿಲೀಫ್ ಫಂಡ್‌ನ ರೂ. 2.59 ಕೋಟಿಗೆ ರೂ. 82ಲಕ್ಷ ಆದಾಯ ತೆರಿಗೆ ಕಟ್ಟಬೇಕು ಇದು ಸಮಿತಿಯ ಲೆಕ್ಕ ಕೊಟ್ಟವರಿಗೆ ತಿಳಿದಿದೆಯೇ ? : ಬಂಗೇರ ಪ್ರಶ್ನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕಾಳಜಿ ರಿಲೀಫ್ ಫಂಡ್‌ನ ಹೆಸರಿನಲ್ಲಿ ಬ್ಯಾಂಕಿನಲ್ಲಿಟ್ಟಿರುವ ರೂ.2.59 ಕೋಟಿ ಹಣ ಕಳೆದ ಒಂದು ವರ್ಷದಿಂದ ಬ್ಯಾಂಕಿನಲ್ಲಿದ್ದು, ಕಾನೂನು ಪ್ರಕಾರ ಇದಕ್ಕೆ ಶೇ 33 ಫರ್ಸೆಂಟ್ ಇನ್‌ಕಮ್ ಟ್ಯಾಕ್ಸ್ ಅಂದರೆ ಸುಮಾರು ರೂ.82 ಲಕ್ಷ ಸಮಿತಿ ಕಟ್ಟಬೇಕಾಗಿದೆ. ಇಲ್ಲವಾದರೆ ಇದನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಹಸ್ತಾಂತರಿಸಬೇಕು. ಕಾಳಜಿ ರಿಲೀಪ್ ಫಂಡ್ ಸಮಿತಿಯ ನಿರ್ಲಕ್ಷದಿಂದಾಗಿ ಈ ಹಣ ತಾಲೂಕಿನ ಜನರಿಗೆ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಲೆಕ್ಕ ಕೊಟ್ಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಧನಂಜಯ ರಾವ್ ಅವರಿಗೆ ತಿಳಿದಿಲ್ಲವೇ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಪ್ರಶ್ನಿಸಿದರು.

ಅವರು ಸೆ.2ರಂದು ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಬ್ಯಾಂಕಿನಲ್ಲಿ ಇಟ್ಟ ಹಣದ ಕುರಿತಂತೆ ಅಡಿಟ್ ಆಗಿಲ್ಲ. ಇದರ ಬಗ್ಗೆ ಸಿಂಡಿಕೇಟ್ ಬ್ಯಾಂಕಿನ ಮೆನೇಜರ್‌ರಲ್ಲಿ ಕೇಳಿದಾಗ ಸರಿಯಾದ ಮಾಹಿತಿ ನೀಡುತ್ತಿಲ್ಲ. ಎರಡು ದಿನದ ನಂತರ ಕೊಡುತ್ತೇವೆ ಎಂದು ಹೇಳುತ್ತಾರೆ. ಈ ರೀತಿ ಹೆದರುವ ಅಗತ್ಯವೇನು? ಇದರಲ್ಲಿ ಏನೂ ನಿಗೂಢತೆ ಅಡಗಿದೆ ಎಂದು ಬಂಗೇರ ಹೇಳಿದರು.


ಶಾಸಕ ಹರೀಶ್ ಪೂಂಜರು ಮಾಡಿದ ತಪ್ಪನ್ನು ಸರಿ ಎಂದು ಧನಂಜಯ ಕುಮಾರ್ ಸಮರ್ಥಿಸಿದ್ದಾರೆ. ಆದರೆ ವಕೀಲರಾಗಿ ಅವರು ಸಾರ್ವಜನಿಕರಿಂದ ಸಂಗ್ರಹಿಸಿದ ಹಣದ ಸತ್ಯ ಸಂಗತಿಯನ್ನು ನೀಡಬೇಕಾದುದು ಅವರ ಧರ್ಮವಾಗಿದೆ. ಅವರು ಸಮಾನ ಮನಸ್ಕರು ಮಾಡಿದ ಸಮಿತಿ ನಾವೇ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಎಂದು ಹೇಳಿದ್ದಾರೆ. ಆದರೆ ಸಮಿತಿ ರಚನೆ ವೇಳೆ ಶಾಸಕರಿದ್ದರು. ದೇಣಿಗೆ ನೀಡಲು ಶಾಸಕರೇ ಮನವಿ ಮಾಡಿದ್ದಾರೆ. ಸಾರ್ವಜನಿಕರು ದೇಣಿಗೆಯನ್ನು ಸಮಿತಿಯವರಿಗೆ ನೀಡಿಲ್ಲ, ಅಧ್ಯಕ್ಷ ಹರೀಶ್ ಪೂಂಜರಿಗೆ ನೀಡಿದ್ದಾರೆ ಇದಕ್ಕೆ ಆ ಸಂದರ್ಭ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳೇ ಸಾಕ್ಷಿಯಾಗಿದೆ ಎಂದರು.

ಹಣ ಬ್ಯಾಂಕಿನಲ್ಲಿ ಇಟ್ಟು ಒಂದು ವರ್ಷ ದಾಟಿದೇ ಆದರೆ ಬಡವರಿಗೆ ಇದನ್ನು ಹಂಚಿಕೆ ಮಾಡಿಲ್ಲ, ಈಗ ನೆರೆಯಿಂದ 285 ಮನೆ ಕಳೆದು ಕೊಂಡ ಫಲಾನುಭವಿಗಳಿಗೆ ನೀಡುತ್ತೇವೆ ಎಂದು ಹೇಳುತ್ತಾರೆ. ಆದರೆ ಅನೇಕ ಮಂದಿ ಅವರ ದಲ್ಲಾಳಿಗಳ ಮೂಲಕ ಮನೆ ಮಂಜೂರು ಮಾಡಿಸಿಕೊಂಡಿದ್ದು, ಇದನ್ನು ಗುರುತಿಸುವ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಮಾಡಲಿದೆ ಎಂದರು.
ಶಾಸಕರು ತಾನು ತಾಲೂಕಿಗೆ ೩೫೭ ಕೋಟಿ ಅನುದಾನ ತಂದದ್ದು ಎಂದು ಹೇಳಿದ್ದರು. ಆದರೆ ಪ್ರತಾಪಸಿಂಹ ನಾಯಕ್ ಅವರು ಪತ್ರಿಕಾಗೋಷ್ಠಿಯಲ್ಲಿ ೪೫೮ ಕೋಟಿ ಎಂದಿದ್ದಾರೆ. ರೂ.111 ಕೋಟಿ ಈಗ ಜಾಸ್ತಿಯಾಗಿದೆ ಎಂದ ಬಂಗೇರರು ಚಂಡಿಕಾಯಾಗದ ಲೆಕ್ಕವನ್ನು ಯಾಗ ಮುಗಿದ ತಕ್ಷಣ ಕೊಟ್ಟಿದ್ದೇನೆ. ಅದು ಪ್ರತಾಪಸಿಂಹ ನಾಯಕ್‌ರಿಗೆ ಬಂದಿಲ್ಲ ಎಂದು ಕಾಣುತ್ತದೆ. ಅದರ ಕಾರ್ಯದರ್ಶಿ ಮಂಜುನಾಥ ಕಾಮತ್ ನಿಮ್ಮ ಪಕ್ಷದವರೇ ಅವರಲ್ಲಿ ಈಗಲೂ ಲೆಕ್ಕ ಇದೆ. ಯಾಗದ ಸಮಯ ನೆರಿಯ ಹೆಬ್ಬಾರರಿಂದ ಪಡೆದ ಸಾಲ ರೂ.8 ಲಕ್ಷ ಇನ್ನೂ ಬಾಕಿಯಿದೆ ಎಂದರು. ಕಿನ್ಯಮ್ಮ ಹಾಲ್‌ನಲ್ಲಿ ಸರ್ವ ಪಕ್ಷ ಸಭೆ ನಡೆಸಿ 2008ರಿಂದ 2018ರವರೆಗೆ ತಾಲೂಕಿಗೆ ರೂ. 2 ಸಾವಿರ ಕೋಟಿ ಅನುದಾನವನ್ನು ತರಿಸಿ ತಾಲೂಕಿನ 81 ಗ್ರಾಮಗಳಿಗೂ ಹಂಚಿದ್ದೇನೆ ಎಂದು ಹೇಳಿದರು.

ಎಂ.ಎಲ್.ಸಿ ಹರೀಶ್ ಕುಮಾರ್ ಮಾತನಾಡಿ, ಪಂಚಾಯತ್ ರಾಜ್ ವ್ಯವಸ್ಥೆ ಜಾರಿ ಮಾಡಿದವರು ರಾಜೀವ್ ಗಾಂಧಿಯವರು ಗ್ರಾ.ಪಂಕ್ಕೆ ನೇರ ಅನುದಾನ ಬರುವಂತೆ ಆಗಿರುವುದು ನರಸಿಂಹ ರಾವ್ ಅವರ ಅವಧಿಯಲ್ಲಿ ಇದು ಮೋದಿ ಮಾಡಿರುವುದಲ್ಲ ಎಂದರು. ನೋಟು ಬ್ಯಾನ್, ಜಿಎಸ್‌ಟಿ ಜಾರಿಯಿಂದ ಆರ್ಥಿಕ ಕುಸಿತಕ್ಕೆ ಬಿಜೆಪಿ ಸರಕಾರವೇ ಕಾರಣವಾಗಿದೆ ಎಂದು ಆರೋಪಿಸಿದರು. ಮಾಜಿ ಸಚಿವ ಗಂಗಾಧರ ಗೌಡ ಮಾತನಾಡಿ ಸಂಗ್ರಹವಾದ ಹಣವನ್ನು ಬ್ಯಾಂಕಿನಲ್ಲಿ ಇಡುವ ಬದಲು ೨೮೫ ಕುಟುಂಬಗಳಿಗೆ ತಲಾ ರೂ.೫ ಲಕ್ಷ ದಂತೆ ಹಂಚಿಕೆ ಮಾಡಿದ್ದರೆ ಹೆಚ್ಚು ಪ್ರಯೋಜನವಾಗುತ್ತಿತ್ತು. ಇನ್ನಾದರೂ ಇದನ್ನು ಫಲಾನುಭವಿಗಳಿಗೆ ಹಂಚಿ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಕುರ್ತೋಡಿ, ರಂಜನ್ ಜಿ. ಗೌಡ, ಜಿ.ಪಂ ಸದಸ್ಯರಾದ ಶಾಹುಲ್ ಹಮೀದ್, ಶೇಖರ ಕುಕ್ಕೇಡಿ, ಧರಣೇಂದ್ರ ಕುಮಾರ್, ನಮಿತಾ, ತಾ.ಪಂ ಸದಸ್ಯ ವಿ.ಟಿ ಸೆಭಾಸ್ಟಿನ್, ಜಯಶೀಲ, ಜಯರಾಮ, ಎಪಿಎಂಸಿ ಅಧ್ಯಕ್ಷ ಚಿದಾನಂದ ಪೂಜಾರಿ, ಯುವ ಕಾಂಗ್ರೆಸ್‌ನ ಅಧ್ಯಕ್ಷ ಅಭಿನಂದನ್, ಮನೋಹರ ಇಳಂತಿಲ, ದಿನೇಶ್ ಕೋಟ್ಯಾನ್ ಬೆಳಾಲು, ಅಯೂಬ್ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.