ತೆಂಕಕಾರಂದೂರು:ಕಾರು ಡಿಕ್ಕಿ, ಬೈಕ್ ಸವಾರನಿಗೆ ಗಂಭೀರ ಗಾಯ


ತೆಂಕಕಾರಂದೂರು: ತೆಂಕಕಾರಂದೂರು ಗ್ರಾಮದ ಗುಂಡೇರಿ ಮುಷ್ಕಾನ ರಸ್ತೆ ತಿರುವಿನಲ್ಲಿ ಕಾರ್ಕಳ ಕಡೆಯಿಂದ ಬರುತ್ತಿದ್ದ ಬೆಂಗಳೂರು ರಾಮಮೂರ್ತಿ ನಗರದ ಕಾರು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಗುರುವಾಯನಕೆರೆಯಿಂದ ಅಳದಂಗಡಿಯಿಂದ ಮನೆಯ ಕಡೆ ತೆರಳುತ್ತಿದ್ದ ಬೈಕ್ ಸವಾರ ದೈಲ ಮನೆ ನಿವಾಸಿ ಆ್ಯಂಟೋನಿಯವರ ಪುತ್ರ ಪ್ರದೀಪ ಅವರ ಬೈಕ್ ಗೆ ಗುದ್ದಿದ್ದು ಬೈಕ್ ಸವಾರನಿಗೆ ತಲೆ, ಮುಖ, ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದೆ.
ಗಾಯಳುವನ್ನು  ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ವೇಣೂರು ಪೋಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.