ಅನಂತ್ತೋಡಿ ದೇವಸ್ಥಾನದಲ್ಲಿ ಅನಂತ ಚತುರ್ದಶಿ ವಿಶೇಷ ಪೂಜೆ

Advt_NewsUnder_1
Advt_NewsUnder_1
Advt_NewsUnder_1

ಬೆಳಾಲು: ಇಲ್ಲಿಯ ಅನಂತ್ತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಅನಂತ ಚತುದರ್ಶಿ ಅಂಗವಾಗಿ ಸೆ.1 ರಂದು ವಿಶೇಷ ಪೂಜೆ ನಡೆಯಿತು. ತೆನೆ ಕಟ್ಟುವ ಕಾರ್ಯಕ್ರಮ ರಾತ್ರಿ ರಂಗಪೂಜೆ ಜರುಗಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರರಾದ ಜೀವಂಧರ್ ಕುಮಾರ್, ಅಸ್ರಣ್ಣರಾದ ಗಿರೀಶ್ ಬಾರಿತ್ತಾಯ ಪಾರಳ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರಿನಿವಾಸ ಗೌಡ ವಕೀಲರು, ಪ್ರಧಾನ ಕಾರ್ಯದರ್ಶಿ ದುರ್ಗ ಪ್ರಸಾದ್ ಕೆರ್ಮುಣ್ಣಾಯ, ಮಹಿಳಾ ಸಮಿತಿಯ ಅಧ್ಯಕ್ಷರಾದ ಹೇಮಲತಾ ಗಣಪನ ಮತ್ತು ಕಾರ್ಯದರ್ಶಿ ಯಶವಂತಿ ಉಪ್ಪಾರು, ಭಜನಾ ಮಂಡಳಿಯ ಅಧ್ಯಕ್ಷ ಜಾರಪ್ಪ ಗೌಡ ಅರಣೆಮಾರು, ಕಾರ್ಯದರ್ಶಿ ಸೀತಾರಾಮ ಬಿ.ಎಸ್ ಮತ್ತು ಪದಾಧಿಕಾರಿಗಳು, ಊರ ಪರವೂರ ಭಕ್ತಾಧಿಗಳು ಭಾಗವಹಿಸಿದ್ದರು. ಅನಂತರಾಮ ಶಬರಾಯ ವೈದಿಕ ಕಾರ್ಯಕ್ರಮ ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.