ನಾವೂರು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಪುಲಿತ್ತಡಿ ಪ್ರದೇಶಕ್ಕೆ ಮಾಜಿ ಶಾಸಕ ವಸಂತ ಬಂಗೇರ ಭೇಟಿ

ನಾವೂರು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಪುಲಿತ್ತಡಿ ಪ್ರದೇಶದಲ್ಲಿ 8 ಮಲೆ ಕುಡಿಯ ಕುಟುಂಬಗಳ ಮನೆಗೆ ವಿದ್ಯುತ್ ಸಂಪಕ೯ ಇಲ್ಲದಿದ್ದರೂ, ಮೀಟರ್ ಅಳವಡಿಸಿ ವಂಚಿಸಿದ್ದು, ಈ ಪ್ರದೇಶಕ್ಕೆ  ಮಾಜಿ ಶಾಸಕ ವಸಂತ ಬಂಗೇರ ಹಾಗೂ ಕಾಂಗ್ರೆಸ್ ನಿಯೋಗಗಳ ಸೆ.1ರಂದು ಭೇಟಿ ನೀಡಿದರು.

ಎರಡುವರೆ ವರ್ಷಗಳ ಹಿಂದೆ ಇಲ್ಲಿನ ಮನೆಗಳಿಗೆ ವಿದ್ಯುತ್ ಮೀಟರ್ ಹಾಕಿ , ವಯರಿಂಗ್ ಮಾಡಲಾಗಿದೆ ಆದರೆ ಇಲ್ಲಿಯವರೆಗೆ ವಿದ್ಯುತ್ ಸಂಪರ್ಕ ಮಾಡಲಾಗಿಲ್ಲ ಎಂಬ ಸ್ಥಳೀಯರು ಆರೋಪಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರುಗಳಾದ ಶೈಲೇಶ್ ಕಮಾರ್ ಕುತೋ೯ಡಿ, ರಂಜನ್ ಜಿ.ಗೌಡ, ಜಿ ಪಂ ಸದಸ್ಯ ಶೇಖರ್ ಕುಕ್ಕೇಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್, ಮನೋಹರ ಇಳಂತಿಲ, ಭರತ್ ಇಂದಬೆಟ್ಟು, ಗಣೇಶ್ , ತನುಜಾ ಶೇಖರ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.