ಎಸ್ಸೆಸ್ಸೆಫ್ ಕಳಂಜಿಬೈಲ್ ಯುನಿಟ್ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

ಪುತ್ತಿಲ : ಎಸ್ಸೆಸ್ಸೆಫ್ ಕಳಂಜಿಬೈಲ್ ಶಾಖೆ ವತಿಯಿಂದ ಆಯೋಜಿಸಿದ ಸ್ವಚ್ಛತಾ ಕಾರ್ಯಕ್ರಮಕ್ಕೆ ಎಂ.ಜೆ.ಎಂ ಖತೀಬರಾದ ಬಹು: ಬಿ.ವೈ ಅಬ್ದುಲ್ ಹಮೀದ್ ಸಅದಿ ಬೇಂಗಿಲ ದುಆ ನಿರ್ವಹಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸ್ವಚ್ಛತಾ ಕಾರ್ಯಕ್ರಮವು ಕಳಂಜಿಬೈಲ್ ಮಸೀದಿ ಸುತ್ತ-ಮುತ್ತಲಿನಲ್ಲಿ ಸ್ವಚ್ಛತಾ ಕಾರ್ಯವನ್ನು ನೆರವೇರಿಸಿ,ಮಸೀದಿಯನ್ನು ಸಂಪರ್ಕಿಸುವ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ತುಂಬಿದ್ದ ಹುಲ್ಲು ಗಿಡಗಳನ್ನು ತೆಗೆಯುವುದರ ಮೂಲಕ, ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆಯನ್ನು ಮಾಡಲಾಯಿತು. ಬೆಳಿಗ್ಗೆಯಿಂದ ಆರಂಭವಾದ ಸ್ವಚ್ಚತಾ ಕಾರ್ಯಕ್ರಮವು ಸಂಜೆ ತನಕ ನಡೆಸಲಾಯಿತು. ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷರು ಮತ್ತು ಎಸ್ ವೈಎಸ್ ಅಧ್ಯಕ್ಷರಾದ ಕೆ.ಹೆಚ್ ಅಬೂಬಕ್ಕರ್ಎಸ್ಸೆಸ್ಸೆಫ್ ಅಧ್ಯಕ್ಷರಾದ ಕೆ.ವಿ ಲತೀಫ್ ಸಅದಿ, ಕಾರ್ಯದರ್ಶಿ ಜಾಬಿರ್ ಕೆ.ಪಿ ಹಾಗೂ ಎಸ್.ವೈ.ಎಸ್ ನಾಯಕರೂ ಎಸ್ಸೆಸ್ಸೆಫ್ ಕಾರ್ಯ ಕರ್ತರೂ ಜಮಾಅತ್ ಹಿರಿಯರೂ ಮುತಅಲ್ಲಿಮರೂ ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.